ಆರ್ಥಿಕ ಹೊರೆ ತಗ್ಗಿಸಲು ಮುಂದಾದ ಏರ್ ಇಂಡಿಯಾ: ದೇಶೀಯ ವಿಮಾನಗಳಲ್ಲಿ ನಾನ್ ವೆಜ್ ಬದಲಿಗೆ ವೆಜ್!

ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ಮುಂದಾಗಿರುವ ಏರ್ ಇಂಡಿಯಾ ದೇಶೀಯ ವಿಮಾನಗಳಲ್ಲಿ ಎಕಾನವಿ ಕ್ಲಾಸ್ ಪ್ರಯಾಣಿಕರಿಗೆ ನಾನ್ ವೆಜ್ ಬದಲಿಗೆ ವೆಜ್ ನೀಡಲು ತೀರ್ಮಾನಿಸಿದೆ...
ಏರ್ ಇಂಡಿಯಾ
ಏರ್ ಇಂಡಿಯಾ
ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ಮುಂದಾಗಿರುವ ಏರ್ ಇಂಡಿಯಾ ದೇಶೀಯ ವಿಮಾನಗಳಲ್ಲಿ ಎಕಾನವಿ ಕ್ಲಾಸ್ ಪ್ರಯಾಣಿಕರಿಗೆ ನಾನ್ ವೆಜ್ ಬದಲಿಗೆ ವೆಜ್ ನೀಡಲು ತೀರ್ಮಾನಿಸಿದೆ. 
ಕೇವಲ ದೇಶೀಯ ವಿಮಾನಗಳಲ್ಲಿ ಮಾತ್ರ ವೆಜ್ ಆಹಾರವನ್ನು ನೀಡಲು ಏರ್ ಇಂಡಿಯಾ ತೀರ್ಮಾನಿಸಿದ್ದು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ನಾನ್ ವೆಜ್ ಆಹಾರ ಮುಂದುವರೆಯಲಿದೆ. ಈ ತೀರ್ಮಾನದಿಂದಾಗಿ ಏರ್ ಇಂಡಿಯಾಗೆ ವಾರ್ಷಿಕ 7 ರಿಂದ 8 ಕೋಟಿ ರುಪಾಯಿ ಉಳಿತಾಯವಾಗಲಿದೆ. ಎಂದು ಏರ್ ಇಂಡಿಯಾ ವಕ್ತಾರ ಆರ್ ಪಿ ರಾವ್ ಹೇಳಿದ್ದಾರೆ. 
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಾಲದ ಸುಳಿಯಲ್ಲಿ ಸಿಲುಕಿರುವುದರಿಂದ ಏರ್ ಇಂಡಿಯಾ ಖಾಸಗೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕೇಂದ್ರ ತೀರ್ಮಾನ ಸಂಬಂಧ ಇಂಡಿಗೋ ಸಂಸ್ಥೆ ಏರ್ ಇಂಡಿಯಾವನ್ನು ಕೊಳ್ಳಲು ಆಸಕ್ತಿ ತೋರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com