ಸಂಸದೀಯ ಸಮಿತಿ ಎದುರು ನೋಟು ನಿಷೇಧದ ಬಗ್ಗೆ ಸ್ಪಷ್ಟನೆ ನೀಡಲಿರುವ ಆರ್ ಬಿಐ ಗೌರ್ನರ್

ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಉರ್ಜಿತ್ ಪಟೇಲ್ ಸಂಸದೀಯ ಸಮಿತಿ ಎದುರು ಹಾಜರಾಗಿ ಸ್ಪಷ್ಟನೆ ನೀಡಲಿದ್ದಾರೆ.
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್
ನವದೆಹಲಿ: ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಉರ್ಜಿತ್ ಪಟೇಲ್ ಸಂಸದೀಯ ಸಮಿತಿ ಎದುರು ಹಾಜರಾಗಿ ಸ್ಪಷ್ಟನೆ ನೀಡಲಿದ್ದಾರೆ. 
500, 1000 ರೂ ನೋಟು ರದ್ದತಿ ಹಾಗೂ ಡಿಜಿಟಲ್ ಎಕಾನಾಮಿಗೆ ಸಂಬಂಧಿಸಿದಂತೆ ಉರ್ಜಿತ್ ಪಟೇಲ್ ಸಂಸದೀಯ ಸಮಿತಿಗೆ ವಿವರಣೆ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಂಸದೀಯ ಸಮಿತಿ ಸಭೆ ಪ್ರಾರಂಭವಾಗಲಿದ್ದು, ಆರ್ ಬಿಐ ನ ಪ್ರತಿನಿಧಿಗಳೂ ಸಹ ಭಾಗಿಯಾಗಲಿದ್ದಾರೆ. 
ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಉರ್ಜಿತ್ ಪಟೇಲ್ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗೆ ಹಾಜರಾಗಿದ್ದ ಉರ್ಜಿತ್ ಪಟೇಲ್, ನೋಟು ನಿಷೇಧದಿಂದ ಉಂಟಾಗಿರುವ ನಗದು ಕೊರತೆ ಕೆಲವೇ ತಿಂಗಳುಗಳಲ್ಲಿ ಕಡಿಮೆಯಾಗಲಿದೆ ಎಂದು ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ನೋಟು ನಿಷೇಧದ ನಂತರ ಬ್ಯಾಂಕ್ ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಜಮಾ ಆಗಿರುವ ಅನುಮಾನಾಸ್ಪದ ಹನದ ಬಗ್ಗೆ ಹಣಕಾಸು ಗುಪ್ತಚರ ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆ ಗಮನ ಹರಿಸುತ್ತಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com