ಎನ್ಇಎಫ್ ಟಿ, ಆರ್ ಟಿಜಿಎಸ್ ಶುಲ್ಕ ಶೇ.75 ರಷ್ಟು ಕಡಿತಗೊಳಿಸಿದ ಎಸ್ ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಎಲೆಕ್ಟ್ರಾನಿಕ್ ಹಣ ವರ್ಗಾವಣೆ (ಎನ್ ಇಎಫ್ ಟಿ) ಹಾಗೂ ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್(ಆರ್ ಟಿಜಿಎಸ್) ವಹಿವಾಟುಗಳ ಶುಲ್ಕವನ್ನು ಶೇ.75 ರಷ್ಟು ಕಡಿಮೆಗೊಳಿಸಿದೆ.
ಎಸ್ ಬಿಐ
ಎಸ್ ಬಿಐ
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಎಲೆಕ್ಟ್ರಾನಿಕ್ ಹಣ ವರ್ಗಾವಣೆ (ಎನ್ ಇಎಫ್ ಟಿ) ಹಾಗೂ ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್(ಆರ್ ಟಿಜಿಎಸ್) ವಹಿವಾಟುಗಳ ಶುಲ್ಕವನ್ನು ಶೇ.75 ರಷ್ಟು ಕಡಿಮೆಗೊಳಿಸಿದೆ. 
ಜು.15 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದೆ. ಇಂಟರ್ ನೆಟ್ ಬ್ಯಾಂಕಿಂಗ್ (ಐಎನ್ ಬಿ) ಹಾಗೂ ಮೊಬೈಲ್ ಬ್ಯಾಂಕಿಂಗ್ (ಎಂಬಿ) ಮೂಲಕ ನಡೆಸುವ ವಹಿವಾಟುಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದ್ದು, 1,000 ರೂ ವರೆಗೆ ತಕ್ಷಣದ ಪಾವತಿ ಸೇವೆಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದುಗೊಳಿಸಲಾಗಿದ್ದು, ಈ ಸೌಲಭ್ಯ ಆ.1 ರಿಂದ ಜಾರಿಗೆ ಬರಲಿದೆ ಎಂದು ಎಸ್ ಬಿಐ ಹೇಳಿದೆ. 
ಭಾರತ ಸರ್ಕಾರ ಡಿಜಿಟಲ್ ಎಕಾನಮಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಗೆ ಉತ್ತೇಜನ ನೀಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ ಬಿಐ ಎಂಡಿ ರಜನೀಷ್ ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com