ಜನ್ ಧನ್ ಖಾತೆ ಠೇವಣಿ 64,564 ಕೋಟಿ ರೂಪಾಯಿಗೆ ಏರಿಕೆ

ಜನ್ ಧನ್ ಖಾತೆಗಳಲ್ಲಿನ ಠೇವಣಿಯಾಗಿರುವ ಮೊತ್ತ 64,564 ಕೋಟಿ ರೂಗಳಿಗೆ ಏರಿಕೆಯಾಗಿದೆ.
ಜನ್ ಧನ್ ಖಾತೆ ಠೇವಣಿ  64,564 ಕೋಟಿ ರೂಗಳಿಗೆ ಏರಿಕೆ
ಜನ್ ಧನ್ ಖಾತೆ ಠೇವಣಿ 64,564 ಕೋಟಿ ರೂಗಳಿಗೆ ಏರಿಕೆ
Updated on
ನವದೆಹಲಿ: ಜನ್ ಧನ್ ಖಾತೆಗಳಲ್ಲಿನ ಠೇವಣಿಯಾಗಿರುವ ಮೊತ್ತ 64,564 ಕೋಟಿ ರೂಗಳಿಗೆ ಏರಿಕೆಯಾಗಿದೆ. ಈ ಪೈಕಿ ಬರೊಬ್ಬರಿ 300 ಕೋಟಿ ರೂಪಾಯಿಯಷ್ಟು ಹಣ ನೋಟು ನಿಷೇಧದ ನಂತರ ಜಮಾವಣೆಯಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. 
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಜನ್ ಧನ್ ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದದೇ ಇದ್ದವರಿಗೆ ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡಲಾಗಿತ್ತು. ನ.08 ರಂದು ರಾತ್ರಿ ನಡೆದ 500, 1000 ರೂ ನೋಟುಗಳ ರದ್ದತಿ ನಂತರ ಅಕ್ರಮ ಹಣವನ್ನು ಜನ್ ಧನ್ ಖಾತೆಯಲ್ಲಿ ಜಮಾವಣೆ ಮಾಡಿ ಸಕ್ರಮಗೊಳಿಸಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ಬೆನ್ನಲ್ಲೇ 
ಜನ್ ಧನ್ ಖಾತೆ ಠೇವಣಿ  64,564 ಕೋಟಿ ರೂಗಳಿಗೆ ಏರಿಕೆಯಾಗಿದ್ದು, ಬರೊಬ್ಬರಿ 300 ಕೋಟಿ ರೂಪಾಯಿಯಷ್ಟು ಹಣ ನೋಟು ನಿಷೇಧದ ನಂತರ ಜಮಾವಣೆಯಾಗಿದೆ ಎಂಬುದು ಬಹಿರಂಗವಾಗಿದೆ. 
ಆರ್ ಟಿಐ ಗೆ ಉತ್ತರ ನೀಡಿರುವ ಹಣಕಾಸು ಇಲಾಖೆ, ಹಣಕಾಸು ಇಲಾಖೆ, ಈ ವರ್ಷದ ಜೂ.14 ರ ವರೆಗೆ 28.9 ಕೋಟಿ ಜನ್ ಧನ್ ಖಾತೆಗಳಿದ್ದವು. 23.27 ಕೋಟಿ ಸಾರ್ವಜನಿಕ ವಲಯ ಬ್ಯಾಂಕ್ ಗಳಿಗೆ ಸೇರಿದ ಖಾತೆಗಳಾಗಿದ್ದು, ಉಳಿದ 4.7 ಕೋಟಿ ಬ್ಯಾಂಕ್ ಖಾತೆಗಳು ಪ್ರಾದೇಶಿಕ ಹಾಗೂ ಗ್ರಾಮೀಣ ಬ್ಯಾಂಕ್ ಗಳಿಗೆ ಸೇರಿದ ಖಾತೆಗಳಾಗಿವೆ. ಇನ್ನು 92.7 ಲಕ್ಷ ಖಾತೆಗಳು ಖಾಸಗಿ ವಲಯದ ಬ್ಯಾಂಕ್ ಗಳಿಗೆ ಸೇರಿದ್ದಾಗಿವೆ. 
ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ 50,800 ಕೋಟಿಯಷ್ಟು ಠೇವಣಿ, ಗ್ರಾಮೀಣ ಹಾಗೂ ಪ್ರಾದೇಶಿಕ ಬ್ಯಾಂಕ್ ಗಳಲ್ಲಿ 11,683.42 ಕೋಟಿ ರೂಪಾಯಿ, ಖಾಸಗಿ ಕ್ಷೇತ್ರದ ಬ್ಯಾಂಕ್ ಗಳಲ್ಲಿ 2,080.62ಕೋಟಿ, ಒಟ್ಟಾರೆ ಜನ್ ಧನ್ ಖಾತೆಗಳಲ್ಲಿನ ಠೇವಣಿ 64,564 ಕೋಟಿ ರೂಗಳಿಗೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com