ಚಿನ್ನವನ್ನು ಕ್ಯಾಶ್ ಬ್ಯಾಕ್ ಆಗಿ ನೀಡಲಿರುವ ಪೇಟಿಎಂ

ತಮ್ಮ ವಹಿವಾಟಿನ ಮೇಲೆ ಕ್ಯಾಶ್ ಬ್ಯಾಕ್ ಆಗಿ ಡಿಜಿಟಲ್ ಗೋಲ್ಡ್ ಪಡೆಯುವ ಅವಕಾಶವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:ತಮ್ಮ ವಹಿವಾಟಿನ ಮೇಲೆ ಕ್ಯಾಶ್ ಬ್ಯಾಕ್ ಆಗಿ ಡಿಜಿಟಲ್ ಗೋಲ್ಡ್ ಪಡೆಯುವ ಅವಕಾಶವನ್ನು ಮೊಬೈಲ್ ವಾಲೆಟ್ ಕಂಪನಿ ಪೆಟಿಎಂ ಗ್ರಾಹಕರಿಗೆ ನೀಡುತ್ತದೆ.
ಈ ವರ್ಷಾರಂಭದಲ್ಲಿ ಪೆಟಿಎಂ, ಗೋಲ್ಡ್ ರಿಫೈನರ್, ಎಂಎಂಟಿಸಿ-ಪಿಎಎಂಪಿ ಜೊತೆ ಸಹಭಾಗಿಯಾಗಿ 1 ರೂಪಾಯಿಗೆ ಚಿನ್ನ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿತ್ತು. ಸಹಭಾಗಿತ್ವದಡಿ ಪೆಟಿಎಂ ವಾಲೆಟ್ ಹೊಂದಿರುವವರು 24 ಕೆ 999.9 ಪ್ಯೂರಿಟಿ ಗೋಲ್ಡ್ ನ್ನು ಆನ್ ಲೈನ್ ಮೂಲಕ ಖರೀದಿಸಿ ಎಂಎಂಟಿಸಿ-ಪಾಂಪ್ಸ್ ನ ಸೆಕ್ಯೂರ್ ವಾಲ್ಟ್ಸ್ ನಲ್ಲಿ ಉಚಿತವಾಗಿ ಸಂಗ್ರಹಿಸಬಹುದು.
ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ ಪೆಟಿಎಂ, ಪೆಟಿಎಂ ವ್ಯಾಲೆಟ್ ಮೂಲಕ ಬಳಕೆದಾರರು ತಮ್ಮ ಕ್ಯಾಶ್ ಬ್ಯಾಕನ್ನು ಪಡೆಯಬಹುದು ಅಥವಾ ಪೆಟಿಎಂ ಗೋಲ್ಡ್ ಮೂಲಕವೂ ಪಡೆಯಬಹುದು.
ದೀರ್ಘಾವಧಿ ಉಳಿತಾಯಕ್ಕೆ ಕ್ಯಾಶ್ ಬ್ಯಾಕ್ ನ್ನು ಪೆಟಿಎಂ ಗೋಲ್ಡ್ ಆಗಿ ಪರಿವರ್ತಿಸಲು ಗ್ರಾಹಕರು ಹೆಚ್ಚಾಗಲು ಕಳೆದ ಕೆಲ ತಿಂಗಳುಗಳಿಂದ ಟ್ರೆಂಡ್ ದಾಖಲಿಸಿದೆ ಎಂದು ಪೆಟಿಎಂ ಹೇಳಿದೆ.
ಈ ಟ್ರೆಂಡನ್ನು ಇನ್ನಷ್ಟು ಹೆಚ್ಚಿಸಲು ಕ್ಯಾಶ್ ಬ್ಯಾಕ್ ನ್ನು ಪೆಟಿಎಂ ಗೋಲ್ಡ್ ಆಗಿ ಜಾರಿಗೆ ತರುತ್ತೇವೆ. ನೀವು ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿ, ಯುಟಿಲಿಟಿ ಬಿಲ್ ಗಳನ್ನು ಪಾವತಿಸುವುದು, ಸಿನಿಮಾ, ಪ್ರಯಾಣ ಟಿಕೆಟ್ ಖರೀದಿಸುವುದು ಇತ್ಯಾದಿಗಳನ್ನು ಮಾಡಿದರೆ ಗ್ರಾಹಕರು ಎಂಎಂಟಿಸಿ-ಪಾಂಪ್ಸ್ ಗಳ ಸೆಕ್ಯುರ್ ಲಾಕರ್ ನಲ್ಲಿ ಇಟ್ಟದ್ದಕ್ಕೆ ಉಚಿತವಾಗಿ ಚಿನ್ನ ಪಡೆಯಬಹುದು ಎಂದು ಪೆಟಿಎಂ ಹಿರಿಯ ಉಪಾಧ್ಯಕ್ಷ ಕೃಷ್ಣ ಹೆಗ್ಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com