ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ದರ 4 ರೂ. ಏರಿಕೆಗೆ ಕೇಂದ್ರ ಸರ್ಕಾರದ ಆದೇಶ

2018 ರ ಮಾರ್ಚ್ ವೇಳೆಗೆ ಎಲ್ ಪಿಜಿ ಸಿಲಿಂಡರ್ ಗಳ ಸಬ್ಸಿಡಿಯನ್ನು ತೆಗೆದುಹಾಕುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ದರವನ್ನು 4 ರೂ. ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ
ಸಬ್ಸಿಡಿ ಅಡುಗೆ ಅನಿಲ
ಸಬ್ಸಿಡಿ ಅಡುಗೆ ಅನಿಲ
ನವದೆಹಲಿ: 2018 ರ ಮಾರ್ಚ್ ವೇಳೆಗೆ ಎಲ್ ಪಿಜಿ ಸಿಲಿಂಡರ್ ಗಳ ಸಬ್ಸಿಡಿಯನ್ನು ತೆಗೆದುಹಾಕುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ದರವನ್ನು 4 ರೂ. ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆದೇಶ ನೀಡಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 
ಸಬ್ಸಿಡಿಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ 14.2 ಕೆಜಿ ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ದರವನ್ನು 2.ರೂ ಏರಿಕೆ ( ವ್ಯಾಟ್ ಹೊರತುಪಡಿಸಿ) ಮಾಡುವಂತೆ ಕೇಂದ್ರ ಸರ್ಕಾರ ಈ ಹಿಂದೆಯೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆದೇಶ ನೀಡಿತ್ತು. ಈಗ ದರ ಏರಿಕೆಯನ್ನು ದುಪ್ಪಟ್ಟುಗೊಳಿಸಲಾಗಿದ್ದು, 2018 ರ ಮಾರ್ಚ್ ವರೆಗೆ ಅಥವಾ ಸಬ್ಸಿಡಿಯನ್ನು ತೆಗೆದುಹಾಕುವವರೆಗೆ ಪ್ರತಿ ತಿಂಗಳು ಎಲ್ ಪಿಜಿ ದರ 4 ರೂ. ಗಳಿಗೆ ಏರಿಕೆ ಮಾಡಲು ಆದೇಶ ನೀಡಲಾಗಿದೆ ಎಂದು ಲೋಕಸಭೆಗೆ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 
ಪ್ರಸ್ತುತ ಸಬ್ಸಿಡಿ ದರದಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್ ನೀಡಲಾಗುತ್ತಿದ್ದು, ಅದಕ್ಕಿಂತ ಹೆಚ್ಚಿನದ್ದನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿದೆ. 2016 ರ ಜು.1 ರಿಂದ 14.2 ಕೆಜಿಯ ಎಲ್ ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳಿಗೆ 2 ರೂಪಾಯಿ ಏರಿಕೆ ಮಾಡಲು ಅವಕಾಶ ಇತ್ತು. ಈ ಆದೇಶ ಬಂದ ನಂತರ ಈ ವರೆಗೂ 10 ಸಂದರ್ಭಗಳಲ್ಲಿ ತೈಲ ಕಂಪನಿಗಳು ದರ ಏರಿಕೆ ಮಾಡಿವೆ. 
ಈಗ ಮೇ.30 ರಂದು ಆದೇಶ ಪರಿಷ್ಕರಣೆ ಮಾಡಿರುವ ಕೇಂದ್ರ ಸರ್ಕಾರ ಜೂ.1 ರಿಂದ ಜಾರಿಗೆ ಬರುವಂತೆ  14.2 ಕೆಜಿಯ ಎಲ್ ಪಿಜಿ ಸಿಲಿಂಡರ್ ದರವನ್ನು (ವ್ಯಾಟ್ ಹೊರತುಪಡಿಸಿ) ಪ್ರತಿ ತಿಂಗಳು 4 ರೂ ಏರಿಕೆ ಮಾಡಲು ಆದೇಶ ನೀಡಿದೆ. ಪರಿಷ್ಕೃತ ಆದೇಶದ ಬಳಿಕ ತೈಲ ಕಂಪನಿಗಳು ಎರಡು ಬಾರಿ ದರ ಏರಿಕೆ ಮಾಡಿದ್ದು, ದೆಹಲಿಯಲ್ಲಿ ಪ್ರತಿ 14.2 ಕೆಜಿ ಸಬ್ಸಿಡಿ ಸಿಲಿಂಡರ್ ದರ 477.46 ರೂಗಳಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com