ಮುರಿದು ಬಿದ್ದ ಸ್ನ್ಯಾಪ್ ಡೀಲ್ - ಫ್ಲಿಪ್ ಕಾರ್ಟ್ ವಿಲೀನ ಮಾತುಕತೆ

ಆನ್ ಲೈನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ನ್ಯಾಪ್ ಡೀಲ್ ಕಂಪನಿ - ಫ್ಲಿಪ್ ಕಾರ್ಟ್ ನೊಂದಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆನ್ ಲೈನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ನ್ಯಾಪ್ ಡೀಲ್ ಕಂಪನಿ - ಫ್ಲಿಪ್ ಕಾರ್ಟ್ ನೊಂದಿಗೆ ವಿಲೀನ ಮಾತುಕತೆಯಿಂದ ಹಿಂದೆ ಸರಿದಿದ್ದು, ಸ್ವತಂತ್ರವಾಗಿ ಮುಂದುವರೆಯಲು ನಿರ್ಧರಿಸಿದೆ.
ಮಾತುಕತೆಯಲ್ಲಿ ಪ್ಲಿಫ್ ಕಾರ್ಟ್ 900-950 ಮಿಲಿಯನ್ ಡಾಲರ್ ಆಫರ್ ನೀಡಿತ್ತು. ಆದರೆ ಈ ಆಫರ್ ಅನ್ನು ಸ್ನ್ಯಾಪ್ ಡೀಲ್ ಇದೀಗ ನಿರಾಕರಿಸಿದೆ.
ಸ್ನ್ಯಾಪ್ ಡೀಲ್ ಕಳೆದ ಕೆಲವು ತಿಂಗಳುಗಳಿಂದ ಕಾರ್ಯತಂತ್ರದ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಈ ಮೂಲಕ ಕಂಪನಿಯು ಸ್ವತಂತ್ರ ಮಾರ್ಗವನ್ನು ಮುಂದುವರಿಸಲು ನಿರ್ಧರಿಸಿದ್ದು, ಇದರ ಪರಿಣಾಮವಾಗಿ ಎಲ್ಲಾ ಕಾರ್ಯತಂತ್ರದ ಚರ್ಚೆಗಳನ್ನು ಅಂತ್ಯಗೊಳಿಸುತ್ತಿದೆ ಎಂದು ಸ್ನ್ಯಾಪ್ ಡೀಲ್ ವಕ್ತಾರರು ನೇರವಾಗಿ ಫ್ಲಿಕ್ ಕಾರ್ಟ್ ಹೆಸರನ್ನು ಪ್ರಸ್ತಾಪಿಸಿದೆ ಇಮೇಲ್ ಮೂಲಕ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಸದ್ಯ ಭಾರತದ ಆನ್ ಲೈನ್ ಮಾರುಕಟ್ಟೆಯನ್ನು ಆಳುತ್ತಿರುವ ಅಮೇಜಾನ್ ಗೆ ಪೈಪೋಟಿ ಒಡ್ಡಲು ಫ್ಲಿಪ್ಕಾರ್ಟ್ ಹಾಗೂ ಸ್ನಾಪ್ ಡೀಲ್ ಒಂದಾಗುತ್ತಿವೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆ ವಿಲೀನ ಮಾತುಕತೆ ಮುರಿದು ಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com