75 ಲಕ್ಷ ರು. ಮೇಲ್ಪಟ್ಟ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿದ ಎಸ್ ಐಬಿ

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ ಸಾಲದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಲ್ ಬಿಐ) ಶುಕ್ರವಾರ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.10ರಷ್ಟು(10 ಬೇಸ್ ಪಾಯಿಂಟ್) ಕಡಿತಗೊಳಿಸಿದೆ.
ಹೊಸ ದರ ಪಟ್ಟಿಯಂತೆ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ ಸಾಲ ಪಡೆಯುವ ಮಹಿಳಾ ವೇತನದಾರರಿಗೆ ಶೇ 8.55 ವಾರ್ಷಿಕ ಬಡ್ಡಿದರದಂತೆ ಸಾಲ ಪಡೆಯಬಹುದು. ಇನ್ನು ಪುರುಷ ವೇತನದಾರರು ವಾರ್ಷಿಕ ಶೇ.8.60ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ.
ಎಸ್ ಬಿಐ ಕಳೆದ ತಿಂಗಳು 30 ಲಕ್ಷ ರುಪಾಯಿ ವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ. 0.25ರಷ್ಟು ಕಡಿತಗೊಳಿಸಿತ್ತು. ಇದೀಗ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸುವ ಮೂಲಕ ದೇಶದಲ್ಲೇ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ನೀಡಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com