ಆರ್ಥಿಕತೆ ಮೇಲೆ ನೋಟು ನಿಷೇಧ ಪರಿಣಾಮ ಮುಂದುವರಿಯಲಿದೆ: ಎಸ್ ಬಿಐ

ಹಳೆಯ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದತಿಯಿಂದ ದೇಶದ ಆರ್ಥಿಕತೆ ಕುಸಿತ ಮುಂದುವರಿ...
ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ
ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ
ನವದೆಹಲಿ: ಹಳೆಯ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದತಿಯಿಂದ ದೇಶದ ಆರ್ಥಿಕತೆ ಕುಸಿತ ಮುಂದುವರಿಯಲಿದ್ದು, ವ್ಯಾಪಾರ, ವಹಿವಾಟು ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.
ನೋಟುಗಳ ಅಮಾನ್ಯತೆಯಿಂದ ದೀರ್ಘಕಾಲದ ಪರಿಣಾಮ ಭಾರತದ ಆರ್ಥಿಕತೆ  ಮತ್ತು ಬ್ಯಾಂಕಿಂಗ್ ಉದ್ಯಮದ ಮೇಲೆ ಉಂಟಾಗಲಿದ್ದು, ಅನಿಶ್ಚಿತತೆಯಿಂದ ಕೂಡಿರುತ್ತದೆ ಎಂದು ಅದು ಹೇಳಿದೆ.
ಹೂಡಿಕೆದಾರರಿಗೆ ಪ್ರಾಥಮಿಕ ಉದ್ಯೋಗ ದಾಖಲೆಗಳು ಅಪಾಯ ಮತ್ತು ಅನಿಶ್ಚಿತತೆಗಳನ್ನು ಒಳಗೊಂಡಿರುತ್ತದೆ. ಹಣಕಾಸಿನ ನಿರ್ವಹಣೆ ಕೆಲವು ಕಾರಣಗಳಿಂದ ವ್ಯತ್ಯಾಸವಾಗಿರುತ್ತದೆ.
ಹೆಚ್ಚಿನ ಸ್ಪರ್ಧಾತ್ಮಕತೆ ನಿವ್ವಳ ಬಡ್ಡಿ ಅಂಚು ಮತ್ತು ಇತರ ಆದಾಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಬ್ಯಾಂಕು ಯಶಸ್ವಿಯಾಗಿ ಸ್ಪರ್ಧೆಯೊಡ್ಡಲು ಸಾಧ್ಯವಾಗದಿದ್ದಲ್ಲಿ ಅದರ ಲಾಭ ಇಳಿಮುಖವಾಗುತ್ತದೆ. ನೋಟು ನಿಷೇಧ ನಡೆಯಿಂದ ಅನುವರ್ತನೆ ವೆಚ್ಚಗಳು ಮತ್ತು ವಂಚನೆ ಪ್ರಕರಣಗಳು ಹೆಚ್ಚಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com