ರೂ. 500 ಮುಖಬೆಲೆಯ ಹೊಸ ಸರಣಿಯ ನೋಟು ಬಿಡುಗಡೆ; ಹಳೆ ನೋಟು ಚಲಾವಣೆ ಮುಂದುವರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ 500 ರೂಪಾಯಿ ಮುಖಬೆಲೆಯ ಎ ಸರಣಿಯ ಹೊಸ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ 500 ರೂಪಾಯಿ ಮುಖಬೆಲೆಯ ಎ ಸರಣಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ಇರುವ ಇ ಸರಣಿಯ 500 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಮುಂದುವರಿಯಲಿವೆ.
ಈಗಾಗಲೇ ಇರುವ 500 ರೂಪಾಯಿ ನೋಟುಗಳ ವಿನ್ಯಾಸದಲ್ಲಿಯೇ ಹೊಸ ನೋಟುಗಳು ಇರುತ್ತವೆ. ಮಹಾತ್ಮಾ ಗಾಂಧಿ ಭಾವಚಿತ್ರವನ್ನು ಹೊಂದಿರುವ 500 ರೂಪಾಯಿ ಮುಖಬೆಲೆಯ ಬ್ಯಾಂಕು ನೋಟುಗಳ ಮುದ್ರಣ ಕಾಲ ಕಾಲಕ್ಕೆ ಮುಂದುವರಿಯುತ್ತಿದ್ದು ಎರಡೂ ಕಡೆ ಎ ಅಕ್ಷರದ ಸರಣಿಯ ನೋಟುಗಳು ಇಂದು ಬಿಡುಗಡೆಯಾಗಿವೆ. ಅದರಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯಿದೆ, ಹಿಂಬದಿಯಲ್ಲಿ 2017ರಲ್ಲಿ ಮುದ್ರಣ ಎಂದು ಪ್ರಕಟವಾಗಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ಎ ಸರಣಿಯ 500 ರೂಪಾಯಿ ನೋಟು ಗಾತ್ರದಲ್ಲಿ 66ಎಂಎಂ x150 ಎಂಎಂ ಇರಲಿದೆ. ನೋಟಿನ ಬಣ್ಣ  ಕಲ್ಲಿನ ಬೂದು ಬಣ್ಣದ್ದಾಗಿದ್ದು ಭಾರತದ ಪರಂಪರಾ ತಾಣವಾದ ಕೆಂಪು ಕೋಟೆಯ ಚಿತ್ರ ಮತ್ತು ಹಿಂಬದಿಯಲ್ಲಿ ಭಾರತದ ಧ್ವಜವಿದೆ.
ಇತರ ಲಕ್ಷಣಗಳು: 500ರ ಹೊಸ ನೋಟಿನಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ, ಅಶೋಕ ಪಿಲ್ಲರ್ ಲಾಂಛನ, ಬ್ಲೀಡ್ ಲೈನ್, ಬಲಭಾಗದಲ್ಲಿ 500ರ ಮುಖಬೆಲೆ ಮತ್ತು ಗುರುತು ಚಿಹ್ನೆಯಿದೆ.  ದೃಷ್ಟಿ ದೋಷ ಇರುವವರು ಕೂಡ 500ರ ನೋಟನ್ನು ಗುರುತಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com