ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಶಂಕೆ; ಎರಡು ಸಂಸ್ಥೆಗಳ ಮೇಲೆ ಐಟಿ ದಾಳಿ

ಹೂಡಿಕೆ ಮೇಲೆ ಹೆಚ್ಚು ಪ್ರಮಾಣದ ಆದಾಯ ನೀಡುವ ಭರವಸೆ ನೀಡುತ್ತಿದ್ದ ಎರಡು ಸಂಸ್ಥೆಗಳ ವಿರುದ್ಧ ಅಕ್ರಮ ಹಣವರ್ಗಾವಣೆ ಶಂಕೆಯಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ
ಅಕ್ರಮ ಹಣ ವರ್ಗಾವಣೆ
ಬೆಂಗಳೂರು: ಹೂಡಿಕೆ ಮೇಲೆ ಹೆಚ್ಚು ಪ್ರಮಾಣದ ಆದಾಯ ನೀಡುವ ಭರವಸೆ ನೀಡುತ್ತಿದ್ದ ಎರಡು ಸಂಸ್ಥೆಗಳ ವಿರುದ್ಧ ಅಕ್ರಮ ಹಣವರ್ಗಾವಣೆ ಶಂಕೆಯಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 
ಅಂಬಿಡಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಇಜಾಜ್ ಬಿಲ್ಡರ್ ಗಳು ಮತ್ತು ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೂ.20 ರಂದು ನಡೆದಿರುವ ದಾಳಿ ಇನ್ನೂ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ಸಯೀದ್ ಅಹ್ಮದ್ ಫರೀದ್ ಹಾಗೂ ಸಯೀದ್ ಅಹ್ಮದ್ ಅಫಕ್ ಎಂಬ ತಂದೆ-ಮಗ ನಡೆಸುತ್ತಿದ್ದ ಅಂಬಿಡಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಬಗ್ಗೆ ಈಗಾಗಲೇ ಪೊಲೀಸರು ಎಫ್ಐ ಆರ್ ದಾಖಲಿಸಿದ್ದು, ಡಿ.2016 ರಲ್ಲಿ 
ಹೂಡಿಕೆ ಮೇಲೆ ಹೆಚ್ಚು ಪ್ರಮಾಣದ ಆದಾಯ ನೀಡುವ  ಬೋಗಸ್ ಯೋಜನೆಯನ್ನು ಪ್ರಾರಂಭಿಸಿ ಈ ವರೆಗೂ 200 ಕೋಟಿ ರೂಪಾಯಿ ಮೊತ್ತವನ್ನು ಸಂಗ್ರಹಿಸಿದ್ದರು ಎಂದು ತಿಳಿದುಬಂದಿದೆ. 
ಹೂಡಿಕೆ ಮೇಲೆ ಪ್ರತಿ ತಿಂಗಳು ಶೇ.45 ರಷ್ಟು ರಿಟನ್ಸ್ ನೀಡುವುದಾಗಿ ಅಂಬಿಡಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಭರವಸೆ ನೀಡಿತ್ತು. ಇಷ್ಟೇ ಅಲ್ಲದೇ ಚೈನ್ ಲಿಂಕ್ ಮೂಲಕ ಶೇ.5 ರಷ್ಟು ಕಮಿಷನ್ ನೀಡುವುದಾಗಿಯೂ ಹೇಳಿತ್ತು. ಈ ಯೋಜನೆಯಡಿ 500 ಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದಾರೆಂದು ಅಂದಾಜಿಸಲಾಗಿದೆ. ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆಯಲ್ಲಿ 300 ಜನರು ಹೂಡಿಕೆ ಮಾಡಲು ಸಿದ್ಧರಾಗಿ ಬಂದಿದ್ದರು ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com