ಮೋದಿ ಅಮೆರಿಕಾ ಭೇಟಿ: ಹೆಚ್-1 ಬಿ ವೀಸಾ ನೀತಿ ಸಡಿಲಿಕೆ ಆಶಾವಾದದಲ್ಲಿ ಐಟಿ ಕಂಪೆನಿಗಳು

ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾಕ್ಕೆ ಭೇಟಿ ನೀಡುತ್ತಿರುವುದನ್ನು ಕಾತರದಿಂದ ಕಾಯುತ್ತಿದೆ. ಭಾರತೀಯ ಕಂಪೆನಿಗಳಿಗೆ ಹೆಚ್ಚಿನ ವ್ಯಾಪಾರದ ಅವಕಾಶ ಮತ್ತು ಹೆಚ್-1 ಬಿ ವೀಸಾವನ್ನು ವೃತ್ತಿಪರರಿಗೆ ಹೆಚ್ಚಿನ ವಿಭಾಗಗಳಲ್ಲಿ ನೀಡುವ ಕುರಿತು ವಿನಾಯ್ತಿ ನೀಡುವ ಬಗ್ಗೆ ಆಶಾವಾದವನ್ನು ಹೊಂದಿದೆ.
ನಮಗೆ ಅಜೆಂಡಾದ ಯಾವುದೇ ಸೂಚನೆ ಇಲ್ಲ, ಹೀಗಾಗಿ ನಾನು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲ ಸಲ ಭೇಟಿಯಾಗುತ್ತಿದ್ದಾರೆ. ಅವರ ಸಂಬಂಧ ಇನ್ನಷ್ಟು ವೃದ್ಧಿಯಾಗುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದು ನಾಸ್ಕೊಮ್ ಅಧ್ಯಕ್ಷ ರಮನ್ ರಾಯ್ ಹೇಳುತ್ತಾರೆ.
ವಾಣಿಜ್ಯ ಇಲಾಖೆ ಕಾರ್ಯದರ್ಶಿ ರೀಟಾ ಟೀಯೋಟಿಯಾ ಪ್ರತಿಕ್ರಿಯೆ ನೀಡಿ, ಪ್ರಧಾನಿ ಹಾಗೂ ಅಮೆರಿಕಾ ಅಧ್ಯಕ್ಷರ ಭೇಟಿ ವೇಳೆ ಯಾವ ವಿಷಯಗಳು ಚರ್ಚೆಗೆ ಬರಲಿವೆ ಎಂದು ಹೇಳುವುದು ಕಷ್ಟ. ಆದರೆ ಉಭಯ ನಾಯಕರು ಹೆಚ್-1 ಬಿ ವೀಸಾ ಕುರಿತು ಮಾತುಕತೆಯಾಡುವುದು ಖಂಡಿತ. ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದು ಮಾಹಿತಿ ತಂತ್ರಜ್ಞಾನ ವಲಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಿದೆ. ಅದಕ್ಕೆ ಅಮೆರಿಕಾ ಹಾಗೂ ಇತರ ಕೆಲ ದೇಶಗಳ ಒಳಮುಖ ನೀತಿಗಳು ಕಾರಣವಾಗುತ್ತವೆ ಎಂದು ಹೇಳಿದರು.
ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕಾ ರಾಜ್ಯ ಇಲಾಖೆಯ ಅಂಕಿಅಂಶ ಪ್ರಕಾರ, ಹೆಚ್-1 ಬಿ ವೀಸಾ ಮೂಲಕ ಅಮೆರಿಕಾಕ್ಕೆ ಹೋದ ಕೌಶಲ್ಯ ನೌಕರರ ಪೂರೈಕೆಯಲ್ಲಿ ಭಾರತ ದೇಶ ಮೊದಲ ಸ್ಥಾನದಲ್ಲಿದೆ. 1997ರಲ್ಲಿ ಭಾರತದಿಂದ ಅಮೆರಿಕಾಕ್ಕೆ ಹೋದ ಹೆಚ್-1 ಬಿ ವೀಸಾ ಹೊಂದಿರುವವರ ಸಂಖ್ಯೆ 31,684 ಆದರೆ 2016ರಲ್ಲಿ 1,26,692 ಆಗಿದೆ. ಇದೇ ಸಮಯದಲ್ಲಿ ಚೀನಾದಿಂದ ಹೆಚ್-1 ಬಿ ವೀಸಾ ಪಡೆದು ಅಮೆರಿಕಾಕ್ಕೆ ಹೋದವರ ಸಂಖ್ಯೆ 1997ರಲ್ಲಿ 3,206 ಮಂದಿಯಿಂದ 2016ರಲ್ಲಿ 21,657 ಮಂದಿ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com