ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

150 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್; ಹಣಕಾಸು ವರ್ಷ ಬದಲು: ನವೆಂಬರ್ ನಲ್ಲಿ ಬಜೆಟ್?

ಮಾರ್ಚ್ ಬದಲು ನವೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡಿಸಲಾಗುವುದು ಎಂದು ಸರ್ಕಾರದದ ಮೂಲಗಳು ತಿಳಿಸಿವೆ ಎಂದು...
Published on
ನವದೆಹಲಿ: ಮುಂದಿನ ವರ್ಷದಿಂದ ಏಪ್ರಿಲ್‌ ಬದಲು ಜನವರಿಯಿಂದಲೇ ಹಣಕಾಸು ವರ್ಷವನ್ನು ಜಾರಿಗೆ ತರಲು  ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದ್ದು ಆ ಮೂಲಕ 150 ವರ್ಷಗಳ ಹಳೇಯ ಸಂಪ್ರದಾಯ ಬದಲಾಗಲಿದೆ.
ಜೊತೆಗೆ  ಮಾರ್ಚ್ ಬದಲು ನವೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡಿಸಲಾಗುವುದು ಎಂದು ಸರ್ಕಾರದದ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
2018ರಿಂದ ಏಪ್ರಿಲ್‌ನಿಂದ ಮಾರ್ಚ್‌ ಬದಲಿಗೆ, ಜನವರಿ ತಿಂಗಳಿನಿಂದ ಡಿಸೆಂಬರ್‌ವರೆಗೆ ಹಣಕಾಸು ವರ್ಷ ಪಾಲಿಸುವ ನಿರ್ಧಾರ ಅಂತಿಮವಾಗಿ ಕಾರ್ಯರೂಪಕ್ಕೆ ತಂದರೆ 150 ವರ್ಷಗಳಷ್ಟು ಹಳೆಯ ಸಂಪ್ರದಾಯಕ್ಕೆ ಕೊನೆ ಬೀಳಲಿದೆ.
ಕ್ಯಾಲೆಂಡರ್‌ ವರ್ಷಕ್ಕೆ ಅನುಗುಣವಾಗಿ ಹಣಕಾಸು ವರ್ಷವನ್ನೂ ಬದಲಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಒಲವು ಹೊಂದಿದ್ದಾರೆ.
ಹಣಕಾಸು ವರ್ಷ ಬದಲಿಸುವುದರ  ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಈಗಾಗಲೇ ಹಣಕಾಸು ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿದೆ.
ಹಣಕಾಸು ವರ್ಷ ಬದಲಿಸುವ ಪ್ರಸ್ತಾವವು ಸದ್ಯಕ್ಕೆ ಚರ್ಚೆಯ ಹಂತದಲ್ಲಿ ಇದೆ. ಸಲಹೆ ಕಾರ್ಯರೂಪಕ್ಕೆ ಬಂದರೆ, ಮುಂದಿನ ವರ್ಷದ ಬಜೆಟ್‌ ಅನ್ನು ನವೆಂಬರ್‌ ತಿಂಗಳಿನಲ್ಲಿಯೇ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com