ಆತಂಕ ಬೇಡ, ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಜುಲೈ 1 ಕೊನೆ ದಿನ ಅಲ್ಲ

ತೆರಿಗೆ ಪಾವತಿದಾರರು ಜುಲೈ 1ರೊಳಗೆ ತಮ್ಮ ಪಾನ್‌ ಕಾರ್ಡ್‌ ಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೆರಿಗೆ ಪಾವತಿದಾರರು ಜುಲೈ 1ರೊಳಗೆ ತಮ್ಮ ಪಾನ್‌ ಕಾರ್ಡ್‌ ಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂಬ ವರದಿಗಳ ಹಿನ್ನೆಲೆಯಲ್ಲಿ ಹಲವರು ಆತಂಕಗೊಡ್ದಿದ್ದಾರೆ. ಆದರೆ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಜುಲೈ1 ಕೊನೆಯ ದಿನ ಅಲ್ಲ. ಜುಲೈ 1ರಿಂದ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಯಾಗೊಳಿಸಲಾಗಿದೆ. 
ಇದೇ ಜುಲೈ 1ರಿಂದ ಜಾರಿಗೆ ಬರುವಂತೆ ತೆರಿಗೆ ಪಾವತಿದಾರರ ಪಾನ್ ಕಾರ್ಡ್‍ಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಜೋಡಣೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ. ಆದರೆ ಇದಕ್ಕೆ ಕೊನೆ ದಿನಾಂಕ ನಿಗದಪಡಿಸಿಲ್ಲ. ಪ್ರಸ್ತೂತ ಆಧಾರ್ ಹೊಂದಿರುವವರು ಪಾನ್ ಕಾರ್ಡ್ ಗೆ ಲಿಂಕ್ ಮಾಡಬಹುದು. ಆಧಾರ್ ಕಾರ್ಡ್ ಇಲ್ಲದವರು ಆಧಾರ್ ಗೆ ಅರ್ಜಿ ಹಾಕಿ, ಬಳಿಕ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಸರ್ಕಾರ ಅವಕಾಶ ನೀಡಿದೆ.
ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಗಳನ್ನು ಹೊಂದುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ತೆರಿಗೆ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ  ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com