ಜಿಎಸ್ ಟಿ ಗ್ರಾಹಕರ, ವ್ಯಾಪಾರಿಗಳ, ಸರ್ಕಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ)ಗೆ ಜೂನ್ 30ರ ಮಧ್ಯರಾತ್ರಿ.....
ದೆಹಲಿ ಪ್ರಧಾನಿ ನರೇಂದ್ರ ಮೋದಿಯ ಕಟೌಟ್
ದೆಹಲಿ ಪ್ರಧಾನಿ ನರೇಂದ್ರ ಮೋದಿಯ ಕಟೌಟ್
ನವದೆಹಲಿ: ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ)ಗೆ ಜೂನ್ 30ರ ಮಧ್ಯರಾತ್ರಿ 12 ಗಂಟೆಗೆ ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜ್ ಅವರು ಚಾಲನೆ ನೀಡುತ್ತಿದ್ದು, ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಜಿಎಸ್ ಟಿ ಗ್ರಾಹಕರ ಮೇಲೆ, ವ್ಯಾಪಾರಿಗಳ ಮೇಲೆ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಜಿಎಸ್ ಟಿ ಜಾರಿಗೆ ಬಂದ ನಂತರವೇ ಅದರ ನಿಜವಾದ ಪರಿಣಾಮ ತಿಳಿಯಲಿದೆ. ಆದರೆ ಸದ್ಯಕ್ಕೆ ವ್ಯಾಪಾರಿಗಳ, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ. ಇನ್ನೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆದಾಯದ ಮೇಲೂ ಸ್ವಲ್ಪ ಮಟ್ಟಿಗೆ ಹೊಡೆತ ಬೀಳುವ ಸಾಧ್ಯತೆ ಇದ್ದು, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ.
ಬ್ಯಾಂಕಿಂಗ್ ಹಾಗೂ ದೂರವಾಣಿ ಸೌಲಭ್ಯ ಇನ್ನುಮುಂದೆ ಮತ್ತಷ್ಟು ದುಬಾರಿಯಾಗಲಿದ್ದು. ನಿಮ್ಮ ತಿಂಗಳ ಮೊಬೈಲ್ ಬಿಲ್ ಹಾಗೂ ರೆಡಿಮೇಡ್ ಬಟ್ಟೆಗಳ ಬೆಲೆ ಹೆಚ್ಚಾಗಲಿದೆ. ಅಲ್ಲದೆ ಎಸಿ ರೆಸ್ಟೋರೆಂಟ್ ಗಳ ತಿಂಡಿ ಮತಷ್ಟು ದುಬಾರಿಯಾಗಲಿದೆ.
ದೀರ್ಘ ಬಾಳಿಕೆಯ ವಸ್ತುಗಳು, ಸಿಮೆಂಟ್, ಚ್ಯೂಯಿಂಗ್ ಗಂ, ಸುಗಂಧ ದ್ರವ್ಯಗಳು, ಶ್ಯಾಂಪೂ, ಸೌಂದರ್ಯ ವರ್ಧಕಗಳು, ಪಟಾಕಿ ಮತ್ತು ಬೈಕ್ ಗಳು ಶೇಕಡಾ 28ರಷ್ಟು ತೆರಿಗೆಗೆ ಒಳಪಡುವುದರಿಂದ ಇವುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಇವುಗಳ ಮೇಲೆ ತರಿಗೆ ಇಲ್ಲ
ಲಕೋಟೆಯಲ್ಲಿ ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಛಾ ಸೆಣಬು, ಕಚ್ಛಾ ರೇಷ್ಮೆ ಜಿಎಸ್ಟಿಯಿಂದ ಮುಕ್ತವಾಗಿವೆ.
ಶಿಕ್ಷಣ ಆರೋಗ್ಯಕ್ಕಿಲ್ಲ ಜಿಎಸ್ಟಿ ಹೊರೆ
ಇನ್ನು ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಎರಡೂ ಸೇವೆಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.
ಶೇ.12ರಷ್ಟು ಜಿಎಸ್ಟಿ
ಬೆಣ್ಣೆ, ತುಪ್ಪ, ಮೊಬೈಲ್, ಗೇರು ಬೀಜ, ಅಲ್ಮೊಂಡ್, ಸಾಸ್, ಹಣ್ಣಿನ ಜ್ಯೂಸ್, ಪ್ಯಾಕ್ ಮಾಡಿದ ಎಳನೀರು, ಅಗರಬತ್ತಿ, ಛತ್ರಿ, 1,000 ರೂಪಾಯಿ ಮೀರಿದ ಉಡುಪುಗಳು ಶೇಕಡಾ 12ರ ತೆರಿಗೆಯನ್ನು ವ್ಯಾಪ್ತಿಗೆ ಬರಲಿವೆ.
ವ್ಯಾಪಾರಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ?
ವಾರ್ಷಿಕ 20 ಲಕ್ಷ ರುಪಾಯಿ ವಹಿವಾಟುಗಿಂತ ಕೆಳಗಿನ ವ್ಯಾಪಾರಿಗಳು ಜಿಎಸ್ಟಿ ಅಡಿಯಲ್ಲಿ ವಿನಾಯಿತಿ ಪಡೆದಿದ್ದಾರೆ. ಈ ಮುಂಚೆ ವಾರ್ಷಿಕ 10 ಲಕ್ಷ ರುಪಾಯಿ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ಕೇವಲ ವ್ಯಾಟ್ ಮಾತ್ರ ಕಟ್ಟುತ್ತಿದ್ದರು. ಆದರೆ ಅಬಕಾರಿ ಸುಂಕದಿಂದ ವಿನಾಯ್ತಿ ನೀಡಲಾಗಿದೆ. 
ಇನ್ನು ವಾರ್ಷಿಕ 20ರಿಂದ 75 ಲಕ್ಷ ವಹಿವಾಟು ನಡೆಸುವ ವ್ಯಾಪಾರಿಗಳು 2.5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಉಳಿದ ವ್ಯಾಪಾರಿಗಳು ತಿಂಗಳಿಗೆ ಮೂರು ಬಾರಿ ರಿಟರ್ನ್ಸ್ ಫೈಲ್ ಮಾಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com