ಸಬ್ಸಿಡಿ ರಹಿತ ಅಡುಗೆ ಅನಿಲ ದರ ಮತ್ತೆ ಏರಿಕೆ: ಮಾರ್ಚ್ 1 ರಿಂದಲೇ ಪರಿಷ್ಕೃತ ದರ ಜಾರಿ

ಸಬ್ಸಿಡಿರಹಿತ ಅಡುಗೆ ಅನಿಲ (ಎಲ್‌ಪಿಜಿ) ದರದಲ್ಲಿ ಮತ್ತೆ ಏರಿಕೆಯಾಗಿದೆ. ಮಾರ್ಚ್‌ 1ರಿಂದಲೇ  ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಭಾರತೀಯ ತೈಲ ನಿಗಮ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಬ್ಸಿಡಿರಹಿತ ಅಡುಗೆ ಅನಿಲ (ಎಲ್‌ಪಿಜಿ) ದರದಲ್ಲಿ ಮತ್ತೆ ಏರಿಕೆಯಾಗಿದೆ. ಮಾರ್ಚ್‌ 1ರಿಂದಲೇ  ಪರಿಷ್ಕೃತ ದರ  ಜಾರಿಗೆ ಬಂದಿದೆ ಎಂದು ಭಾರತೀಯ ತೈಲ ನಿಗಮ (ಐಒಸಿ)ಪ್ರಕಟಿಸಿದೆ.

ಬೆಂಗಳೂರು ಮತ್ತು ದೆಹಲಿಯಲ್ಲಿ 86 ರು. ಮುಂಬೈನಲ್ಲಿ   88, ಕೋಲ್ಕತ್ತ ಮತ್ತು ಚೆನ್ನೈನಲ್ಲಿ 85 ರು. ನಷ್ಟು ದುಬಾರಿಯಾಗಲಿದೆ. ಸ್ಥಳೀಯ ತೆರಿಗೆ ಕಾರಣ ವಿವಿಧ ರಾಜ್ಯಗಳಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ.  ಕಳೆದ ತಿಂಗಳಷ್ಟೇ ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್‌ ದರವನ್ನು 76ರಷ್ಟು ಹೆಚ್ಚಿಸಲಾಗಿತ್ತು.

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಫೆಬ್ರವರಿ 28 ರ ವರೆಗೂ 651.50 ರೀ ಇತ್ತು, ಮಾರ್ಚ್ 1 ರಿಂದ 737.50 ರು ಆಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ಅಡುಗೆ ಅನಿಲದ ಬೆಲಯಲ್ಲು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com