ಪೆಟಿಎಂನಲ್ಲಿ ರಿಲಯನ್ಸ್ ಕ್ಯಾಪಿಟಲ್ ಷೇರು ಅಲಿಬಾಬಾ ಗ್ರೂಪ್ ಗೆ 275 ಕೋಟಿ ರೂ.ಗೆ ಮಾರಾಟ

ಜನಪ್ರಿಯ ಡಿಜಿಟಲ್ ಪಾವತಿ ಸಂಸ್ಥೆಯಾದ ಪೆಟಿಎಂನಲ್ಲಿ ಶೇಕಡಾ 1ರಷ್ಟು ಷೇರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜನಪ್ರಿಯ ಡಿಜಿಟಲ್ ಪಾವತಿ ಸಂಸ್ಥೆಯಾದ ಪೆಟಿಎಂನಲ್ಲಿನ ಶೇಕಡಾ 1ರಷ್ಟು ಷೇರನ್ನು ಚೀನಾ ಮೂಲದ ಅಲಿಬಾಬಾ ಗ್ರೂಪ್ ಗೆ 275 ಕೋಟಿ ರೂಪಾಯಿಗೆ ಮಾರಾಟ ಮಾಡಿರುವ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್ ಭಾರೀ ಲಾಭ ಗಳಿಸಿದೆ.
ರಿಲಯನ್ಸ್ ಗ್ರೂಪ್ ನ ಹಣಕಾಸು ಸೇವೆಗಳ ವಿಭಾಗ ಪೆಟಿಎಂನಲ್ಲಿ ಈ ಷೇರಿಗೆ 10 ಕೋಟಿ ರೂಪಾಯಿ ವಿನಿಯೋಗಿಸಿತ್ತು. 
ಈ ಒಪ್ಪಂದದಿಂದಾಗಿ ಪೆಟಿಎಂನ ಮೌಲ್ಯ 4 ಶತಕೋಟಿ ಡಾಲರ್ ಗಿಂತಲೂ ಅಧಿಕವಾಗಲಿದೆ. ಇದಕ್ಕೆ ಈಗಾಗಲೇ ಆಲಿಬಾಬ ಗ್ರೂಪ್ ಆಯಕಟ್ಟಿನ ಹೂಡಿಕೆದಾರನಾಗಿ ಬೆಂಬಲ ನೀಡಿದೆ.
ರಿಲಯನ್ಸ್  ಕ್ಯಾಪಿಟಲ್ ಪೆಟಿಎಂನ ಇ-ಕಾಮರ್ಸ್ ನಲ್ಲಿ ಷೇರನ್ನು ಪಡೆದುಕೊಂಡಿತ್ತು. ಇತ್ತೀಚಿನ ನಿಧಿ ಸಂಗ್ರಹ ಸುತ್ತಿನಲ್ಲಿ ಪೆಟಿಎಂ ಇ-ಕಾಮರ್ಸ್ ಗೆ 1 ಶತಕೋಟಿ ಡಾಲರ್ ಗಿಂತ ಹೆಚ್ಚು ಮೌಲ್ಯವಿದೆ.
ಈ ಒಪ್ಪಂದದ ಬಗ್ಗೆ ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆಯ ವಕ್ತಾರರಾಗಲಿ, ಪೆಟಿಎಂ ವಕ್ತಾರರಾಗಲಿ ಪ್ರತಿಕ್ರಿಯೆ ನೀಡಿಲ್ಲ. 
ತನ್ನ ಸ್ವಾಮ್ಯದ ಹೂಡಿಕೆ ಬಂಡವಾಳವನ್ನು ಅವಶ್ಯಕವಲ್ಲದ ಆಸ್ತಿಗಳನ್ನು ನೋಟಿನ ರೂಪಕ್ಕೆ ತರಲು ಕಂಪೆನಿ ಮುಂದಾಗಿದೆ ಎಂದು ರಿಲಯನ್ಸ್ ಕ್ಯಾಪಿಟಲ್ ಈ ಹಿಂದೆ ಹೇಳಿತ್ತು.
ಅಲಿಬಾಬ ಸಿಂಗಾಪುರ್ ಇ-ಕಾಮರ್ಸ್, ಹೂಡಿಕೆ ಸಂಸ್ಥೆಯಾದ ಸೈಫ್ ಜೊತೆಗೆ ಸಹಭಾಗಿತ್ವ ಹೊಂದಿದ್ದು ಪೆಟಿಎಂ ಆನ್ ಲೈನ್ ಮಾರುಕಟ್ಟೆ ಘಟಕದಲ್ಲಿ 200 ದಶಲಕ್ಷ ಡಾಲರ್ ಹೂಡಿಕೆ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com