ಉಳಿತಾಯ ಖಾತೆಯಿಂದ ನಗದು ವಿತ್ ಡ್ರಾ ಮೇಲಿನ ಆರ್ ಬಿಐ ಮಿತಿಗಳು ಇಂದಿಗೆ ಮುಕ್ತಾಯ

ಹಳೆಯ 500 ಮತ್ತು 1000ದ ನೋಟುಗಳ ಅನಾಣ್ಯೀಕರಣದ ನಂತರ ಬ್ಯಾಂಕುಗಳಲ್ಲಿನ ಉಳಿತಾಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮುಂಬೈ: ಹಳೆಯ 500 ಮತ್ತು 1000ದ ನೋಟುಗಳ ಅನಾಣ್ಯೀಕರಣದ ನಂತರ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳಲ್ಲಿರುವ ಹಣವನ್ನು ವಿತ್ ಡ್ರಾ ಮಾಡುವುದರ ಮೇಲೆ ಹೇರಲಾಗಿದ್ದ ಎಲ್ಲಾ ಮಿತಿಗಳು ಇಂದಿಗೆ ಮುಕ್ತಾಯವಾಗಿದೆ. 
ಉಳಿತಾಯ ಖಾತೆಗಳಲ್ಲಿರುವ ನಗದನ್ನು ವಿತ್ ಡ್ರಾ ಮಾಡಲು ಆರ್ ಬಿಐ ಕೆಲವು ಷರತ್ತುಗಳನ್ನು ಹೇರಿತ್ತು. ಎರಡು ಹಂತಗಳ ಪ್ರಕ್ರಿಯೆ ಮೂಲಕ ಪ್ರತಿ ಖಾತೆಯಲ್ಲಿನ ವಾರದ ವಿತ್ ಡ್ರಾ ಮಿತಿಯನ್ನು 24,000ಗಳಿಂದ 50,000ಕ್ಕೆ ಫೆಬ್ರವರಿ 20ರಂದು ಹೆಚ್ಚಿಸಲಾಗಿತ್ತು. ಎರಡನೇ ಹಂತವಾಗಿ ಇಂದಿನಿಂದ ಎಟಿಎಂ ವಿತ್ ಡ್ರಾ ಮಿತಿಯನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. 
ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಕೊನೆಯ ವಿತ್ತೀಯ ಹಣಕಾಸು ನೀತಿಯ ಪರಾಮರ್ಶೆ ನಡೆಸಿದ ನಂತರ ಆರ್ ಬಿಐ ಉಪ ಗವರ್ನರ್ ಆರ್.ಗಾಂಧಿ ಈ ಘೋಷಣೆ ಮಾಡಿದ್ದಾರೆ.
ಅದೇ ರೀತಿ ಆರ್ ಬಿಐ ತನ್ನ ಪ್ರಮುಖ ಬಡ್ಡಿ ದರದ ಯಥಾಸ್ಥಿತಿ ಶೇಕಡಾ 6.25 ಕಾಯ್ದಿರಿಸಿದೆ. ಸರ್ಕಾರದ ಅನಾಣ್ಯೀಕರಣದ ನಂತರದ ಪರಿಣಾಮವನ್ನು ನೋಡುತ್ತಿರುವುದಾಗಿ ಹೇಳಿತ್ತು.
ಜನವರಿ 30ರಂದು ಆರ್ ಬಿಐ  ಚಾಲ್ತಿ ಖಾತೆ, ನಗದು ಸಾಲ ಖಾತೆ ಮತ್ತು ಓವರ್ಡ್ರಾಫ್ಟ್ ಖಾತೆಗಳ ಮೇಲೆ ಹೇರಿದ್ದ ಎಲ್ಲಾ ಮಿತಿಗಳನ್ನು ಹಿಂತೆಗೆದುಕೊಂಡಿತ್ತು. 
ನವೆಂಬರ್ 8ರಂದು ಹಳೆಯ 500 ಮತ್ತು 1000ದ ನೋಟುಗಳನ್ನು ನಿಷೇಧಿಸಿದ ನಂತರ ಆರಂಭದಲ್ಲಿ ಎಟಿಎಂಗಳಿಂದ ದಿನಕ್ಕೆ 2,500 ರೂಪಾಯಿಗಳನ್ನು ನಂತರ 4.500 ರೂಪಾಯಿಗಳಷ್ಟು ಮಾತ್ರ ವಿತ್ ಡ್ರಾ ಮಾಡುವಂತೆ ಜನತೆಗೆ ಅವಕಾಶ ಕಲ್ಪಿಸಲಾಯಿತು.
ಜನವರಿಯಲ್ಲಿ ಎಟಿಎಂನಿಂದ ದಿನಕ್ಕೆ 10,000 ವನ್ನು ಹಿಂತೆಗೆದುಕೊಳ್ಳಬಹುದೆಂದು ಮತ್ತು ವಾರಕ್ಕೆ ಚಾಲ್ತಿ ಖಾತೆಯಿಂದ 1 ಲಕ್ಷ ರೂಪಾಯಿಗಳನ್ನು ವಿತ್ ಡ್ರಾ ಮಾಡುವ ಗರಿಷ್ಠ ಮಿತಿ ಅವಕಾಶವನ್ನು ಆರ್ ಬಿಐ ನೀಡಿತ್ತು.
ನೋಟು ಅನಾಣ್ಯೀಕರಣದ ನಂತರ ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com