ಅಂಚೆ ಇಲಾಖೆಗೆ ಲಾಭ ಶೇ.11 ರಷ್ಟು ಏರಿಕೆ

ಅಂಚೆ ಇಲಾಖೆಗೆ ಬರುತ್ತಿರುವ ಲಾಭದಲ್ಲಿ ಶೇ.11 ರಷ್ಟು ಏರಿಕೆಯಾಗಿದ್ದು, 2015-16 ನೇ ಸಾಲಿನಲ್ಲಿ ಒಟ್ಟಾರೆ 12,940 ಕೋಟಿ ರೂಪಾಯಿ ಆದಾಯಗಳಿಸಿದೆ.
ಅಂಚೆ ಇಲಾಖೆ
ಅಂಚೆ ಇಲಾಖೆ
ಬೆಂಗಳೂರು: ಅಂಚೆ ಇಲಾಖೆಗೆ ಬರುತ್ತಿರುವ ಲಾಭದಲ್ಲಿ ಶೇ.11 ರಷ್ಟು ಏರಿಕೆಯಾಗಿದ್ದು, 2015-16 ನೇ ಸಾಲಿನಲ್ಲಿ ಒಟ್ಟಾರೆ 12,940 ಕೋಟಿ ರೂಪಾಯಿ ಆದಾಯಗಳಿಸಿದೆ.
ಸಂವಹನ ಸಚಿವ ಮನೋಜ್ ಸಿನ್ಹಾ ಈ ಬಗ್ಗೆ ಸಂಸತ್ ಗೆ ಮಾಹಿತಿ ನೀಡಿದ್ದು, ಕಳೆದ 3 ವರ್ಷಗಳಲ್ಲಿ ಅಂಚೆ ಇಲಾಖೆಯ ಲಾಭ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು 2013-14 ರಲ್ಲಿ 10,730.42 ಕೋಟಿಯಷ್ಟಿದ್ದ ಆದಾಯ 
2014-15 ರಲ್ಲಿ 12,939.79 ರಷ್ಟಿತ್ತು. 2015-16 ರ ಸಾಲಿನಲ್ಲಿ 12,940 ಯಷ್ಟಾಗಿದೆ ಎಂದು ತಿಳಿಸಿದ್ದಾರೆ. 
ಸ್ಪೀಡ್ ಪೋಸ್ಟ್, ನೋಂದಾವಣೆ, ವ್ಯಾಪಾರ ವಿಭಾಗಗಳಿಂದ ಅಂಚೆ ಇಲಾಖೆಯ ಆದಾಯ ಹೆಚ್ಚಿದೆ ಎಂದು ಮನೋಜ್ ಸಿನ್ಹಾ ಸಂಸತ್ ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸ್ಟಾಂಪ್ ಮಾರಾಟ, ಮನಿ ಆರ್ಡರ್ ಗೆ ವಿಧಿಸಲಾಗುವ ಶುಲ್ಕದಲ್ಲಿ ಕುಸಿತ ಉಂಟಾಗಿದ್ದು, 2013-14 ರಲ್ಲಿ  670.67 ಕೋಟಿಯಷ್ಟಿದ್ದ ಸ್ಟಾಂಪ್ ಮಾರಾಟದ ಆದಾಯ 2015-16 ರಲ್ಲಿ 441.75 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. 
650 ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹರಿಗಾಗಿ 1,000 ಎಟಿಎಂಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com