ಕಾಮನ್ ಮ್ಯಾನ್ ಗೆ ಅಚ್ಛೇ ದಿನ್: ಕಳೆದ 1 ವರ್ಷದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಶೇ.30ರಷ್ಟು ಇಳಿಕೆ

ಹಣ ದುಬ್ಬರದ ಒತ್ತಡದ ನಡುವೆ ಸಾಮಾನ್ಯ ವ್ಯಕ್ತಿ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ಶೇ.30 ರಷ್ಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹಣ ದುಬ್ಬರದ ಒತ್ತಡದ ನಡುವೆ ಸಾಮಾನ್ಯ ವ್ಯಕ್ತಿ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ಶೇ.30 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಂಪುಟ ಕಾರ್ಯದರ್ಶಿ ಪಿ.ಕೆ ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿ ಈ ವಿಷ ತಿಳಿಸಿದೆ. ಈ ಬಾರಿ ಕಡಲೆಬೇಳೆಯ ಬಂಪರ್ ಬೆಳೆಯಿಂದಾಗಿ ಅದರ ಬೆಲೆಕೂಡ ಕಡಿಮೆಯಾಗಲಿದೆ ಎಂದು ಹೇಳಿದೆ. ಈ ಬಾರಿಯ ಖಾರಿಫ್ ಸೀಸನ್ ನಲ್ಲಿ  ದಾಖಲೆಯ ಪ್ರಮಾಣದಲ್ಲಿ ಖರೀದಿ ನಡೆದಿದೆ ಎಂದು ತಿಳಿಸಿದೆ.

ಪ್ರಸಕ್ತ ಖಾರಿಫ್ ಸೀಸನ್ ನಲ್ಲಿ ಪ್ರತಿ ಕೆಜಿಗೆ 50.50 ರು. ಬೆಂಬಲ ನೀಡಿ ರೈತರಿಂದ 8 ಲಕ್ಷ ಟನ್ ಬೇಳೆಕಾಳುಗಳನ್ನು ಖರೀದಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಬೇಳೆಕಾಳು ಗಳ ಬೆಲೆ ಶೇ. 30 ರಷ್ಟು ಇಳಿದಿದೆ ಎಂದು ಸಮಿತಿ ತಿಳಿಸಿದೆ.

ದಾಖಲೆಯ ಪ್ರಮಾಣದಲ್ಲಿ ಕಡಲೆ ಕಾಳು ಬೆಳೆ ಉತ್ಪಾದನೆಯಾಗಿರುವುದಿಂದ ಈ ಬಾರಿ ರಾಬಿ ಸೀಸನ್ ನಲ್ಲಿ ಕಡಲೆ ಬೇಳೆ ಬೆಲೆ ಕಡಿಮೆಯಾಗಲಿದೆ ಎಂದು ತಿಳಿಸಿದೆ. ಬೇಳೆಯ ಬೆಲೆ ಪ್ರತಿ ಕೆಜಿಗೆ 200 ರು ತಲುಪಿದ್ದ ಹಿನ್ನೆಲೆಯಲ್ಲಿ ಸರ್ಕಾರ 20 ಲಕ್ಷ ಟನ್ ಬಫ್ಫರ್ ಸ್ಟಾಕ್ ಗೆ ಅವಕಾಶ ನೀಡಿದೆ.

2016-17 ರ ಸಾಲಿನಲ್ಲಿ  ಸುಮಾರು 22 ಮಿಲಿಯನ್ ಟನ್ ಬೇಳೆಕಾಳುಗಳ ಉತ್ಪಾದನೆಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ 16.5 ಮಿಲಿಯನ್ ಟನ್ ಉತ್ಪಾದನೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com