ನವದೆಹಲಿ: ಏಜೆಂಟ್ ಗಳ ಕಮಿಷನ್ ನ್ನು ಪರಿಷ್ಕರಣೆ ಮಾಡುವ ವಿಮೆ ಸಂಸ್ಥೆಗಳ ಪ್ರಸ್ತಾವನೆಗೆ ಭಾರತೀಯ ವಿಮೆ ಮತ್ತು ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ತತ್ಪರಿಣಾಮವಾಗಿ ಕಾರು, ದ್ವಿಚಕ್ರ ವಾಹನ, ಆರೋಗ್ಯ ವಿಮೆ ಸೇರಿದಂತೆ ಜೀವ ವಿಮೆ ಹೊರತಾದ ಎಲ್ಲಾ ರೀತಿತ ವಿಮೆಗಳ ಕಂತು ಏ.1 ರಿಂದ ಏರಿಕೆಯಾಗಲಿದೆ.
ಈಗಿರುವ ದರಕ್ಕಿಂತ ಗರಿಷ್ಠ ಶೇ.5 ರಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಪರಿಷ್ಕೃತ ದರ ಏಪ್ರಿಲ್.1 ರಿಂದ ಜಾರಿಗೆ ಬರಲಿದೆ. ಐಆರ್ ಡಿಐ ನಿಯಮಗಳು ಏಪ್ರಿಲ್ 1 2017 ರಿಂದ ಜಾರಿಗೆ ಬರಲಿದ್ದು, ಏಜೆಂಟ್ ಗಳಿಗೆ ರಿವಾರ್ಡ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗುತ್ತಿದೆ.
ಕಮಿಷನ್ ನ್ನು ಪರಿಷ್ಕರಣೆ ಮಾಡುತ್ತಿರುವುದರಿಂದ ವಿಮೆ ಮಾಡಿಸಿರುವವ ವಿಮೆಯ ಕಂತಿನ ಮೊತ್ತ ಏ.1 ರಿಂದ ಗರಿಷ್ಠ ಶೇ. 5 ರಷ್ಟು ದುಬಾರಿಯಾಗಲಿದೆ ಎಂದು ಐಆರ್ ಡಿಐ ತಿಳಿಸಿದೆ.