ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಕಾಲಾವಧಿ ಠೇವಣಿ ಮೇಲಿನ ಬಡ್ಡಿದರ ಇಳಿಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟರ್ಮ್ ಡೆಪಾಸಿಟ್(ಕಾಲಾವಧಿಯ ಠೇವಣಿ) ಮೇಲೆ...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟರ್ಮ್ ಡೆಪಾಸಿಟ್(ಕಾಲಾವಧಿಯ ಠೇವಣಿ) ಮೇಲೆ 50 ಆಧಾರ ಅಂಕಗಳನ್ನು ಕಡಿತ ಮಾಡಿದ್ದು, ಇದರಿಂದಾಗಿ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಮೆಚ್ಯೂರಿಟಿಯಾಗುವ ಠೇವಣಿಗಳ ಮೇಲಿನ ಬಡ್ಡಿದರ ವರ್ಷಕ್ಕೆ ಶೇಕಡಾ 6 .75ರಿಂದ 6.25ಕ್ಕೆ ಇಳಿಕೆಯಾಗಲಿದೆ. 
ಬಡ್ಡಿ ದರಗಳಲ್ಲಿ ಪರಿಷ್ಕರಣೆ ಏಪ್ರಿಲ್ 29ರಿಂದ ಜಾರಿಗೆ ಬಂದಿದೆ. ನವೀಕರಣಗೊಂಡ ಈಗಾಗಲೇ ಇರುವ ಖಾತೆಗಳಿಗೆ ಮತ್ತು ಹೊಸ ಖಾತೆಗಳಿಗೆ ಹೊಸ ಬಡ್ಡಿದರ ಅನ್ವಯವಾಗಲಿದೆ. ಮೂರು ವರ್ಷಕ್ಕೆ ಮತ್ತು ಅದಕ್ಕಿಂತ ಹೆಚ್ಚು ವರ್ಷಕ್ಕೆ ಮೆಚ್ಯೂರಿಟಿಯಾಗುವ ಠೇವಣಿಗಳ ಬಡ್ಡಿದರ ಶೇಕಡಾ 6.25ರಿಂದ ಶೇಕಡಾ 6.5ಕ್ಕೆ ಇಳಿಕೆಯಾಗಲಿದೆ. ಸಾಮಾನ್ಯ ಹೂಡಿಕೆ ವರ್ಷಕ್ಕೆ ಒಂದು ವರ್ಷದಿಂದ 455 ದಿನಕ್ಕೆ ಬಡ್ಡಿದರ ಶೇಕಡಾ 6.9ರಷ್ಟಾಗಲಿದೆ.
ಹಿರಿಯ ನಾಗರಿಕರಿಗೆ ಸ್ಟೇಟ್ ಬ್ಯಾಂಕ್ ಶೇಕಡಾ 7.4ರಷ್ಟು ಬಡ್ಡಿದರ ನೀಡಲಿದೆ. ಎರಡು-ಮೂರು ವರ್ಷಗಳ ಅವಧಿಯ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿದರವನ್ನು ಕೂಡ 50 ಆಧಾರ ಅಂಕಗಳ ಮೇಲೆ ಕಡಿಮೆ ಮಾಡಲಾಗಿದೆ. ಮೂರು ವರ್ಷಗಳಿಗೂ ಮೀರಿ ಠೇವಣಿಯಿಟ್ಟರೆ ಹಿರಿಯ ನಾಗರಿಕರು 25 ಆಧಾರ ಅಂಕಗಳ ಮೇಲೆ ಬಡ್ಡಿದರ ಗಳಿಸುತ್ತಾರೆ.
ಸಾಲದ ಮೇಲಿನ ಬಡ್ಡಿದರವನ್ನು ಸ್ಟೇಟ್ ಬ್ಯಾಂಕ್ ಬದಲಾಯಿಸಿಲ್ಲ, ಶೇಕಡಾ 8ರಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ. 
ಸ್ಟೇಟ್ ಬ್ಯಾಂಕ್ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಅತಿದೊಡ್ಡ ಬ್ಯಾಂಕು ಆಗಿರುವುದರಿಂದ ಬೇರೆ ಬ್ಯಾಂಕುಗಳ ಬಡ್ಡಿದರದಲ್ಲಿ ಅದನ್ನು ಅನುಸರಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com