ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಗೃಹ ಸಾಲ ಬಡ್ಡಿ ದರ ಶೇಕಡಾ 0.25ರಷ್ಟು ಕಡಿತ

ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿದರವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿದರವನ್ನು ಶೇಕಡಾ0.25ರಷ್ಟು ಕಡಿಮೆ ಮಾಡಿದ್ದು ಹೊಸದಾಗಿ ಸಾಲ ಪಡೆದುಕೊಳ್ಳುವವರಿಗೆ ಶೇಕಡಾ 8.35ರಷ್ಟು ಬಡ್ಡಿ ತೆರಬೇಕಾಗುತ್ತದೆ. ನೂತನ ಬಡ್ಡಿದರ ನಾಳೆಯಿಂದಲೇ ಜಾರಿಗೆ ಬರಲಿದೆ. 
ಈ ಬಡ್ಡಿದರ ಜುಲೈ 31ರವರೆಗೆ ಅನ್ವಯವಾಗಲಿದ್ದು ಪುರುಷರು ಸಾಲ ಕೊಳ್ಳುವುದಾದರೆ ಶೇಕಡಾ 8.40ಮತ್ತು ಮಹಿಳೆಯರಿಗೆ ಶೇಕಡಾ 0.25ರಷ್ಟು ಬಡ್ಡಿ ಕಡಿಮೆಯಾಗಲಿದೆ. ಇದು ವೇತನ ಹೊಂದಿರುವವರಿಗಾದರೆ ವೇತನರಹಿತರಿಗೆ ಶೇಕಡಾ 0.20ಯಷ್ಟಿದೆ.ಪುರುಷ ವೇತನದಾರರು ಮತ್ತು ವೇತನ ರಹಿತದಾರರಿಗೂ ಈ ಬಡ್ಡಿಮೊತ್ತ ಅನ್ವಯವಾಗಲಿದೆ. 
2.23 ಟ್ರಿಲಿಯನ್ ಗೃಹಸಾಲ ಕಾಯ್ದಿರಿಸಲಾಗಿದ್ದು ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಚೂಣಿಯಲ್ಲಿದೆ. ಮಾರುಕಟ್ಟೆ ಷೇರಿನ ಶೇಕಡಾ 25ರಿಂದ 26ರಷ್ಟು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com