ಯಾವುದೇ ಉದ್ಯೋಗ ಕಡಿತ ಇಲ್ಲ ಎಂದ ಸಾಫ್ಟ್ ವೇರ್ ದೈತ್ಯ ಟಿಸಿಎಸ್

ಜಾಗತಿಕ ಗತಿಗೆ ಸೆಡ್ಡು ಹೊಡೆದಿರುವ ಸಾಫ್ಟ್ವೇರ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸದ್ಯಕ್ಕೆ ಉದ್ಯೋಗಗಳನ್ನು ಕಡಿತಗೊಳಿಸುವ ಯಾವುದೇ ಯೋಜನೆಯನ್ನು ತಳ್ಳಿಹಾಕಿದ್ದು,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: ಜಾಗತಿಕ ಗತಿಗೆ ಸೆಡ್ಡು ಹೊಡೆದಿರುವ ಸಾಫ್ಟ್ವೇರ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸದ್ಯಕ್ಕೆ ಉದ್ಯೋಗಗಳನ್ನು ಕಡಿತಗೊಳಿಸುವ ಯಾವುದೇ ಯೋಜನೆಯನ್ನು ತಳ್ಳಿಹಾಕಿದ್ದು, ಇನ್ನು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತಿರುವುದಾಗಿ ಹೇಳಿದೆ. 
"ಇಲ್ಲ. ಖಂಡಿತ ಇಲ್ಲ" ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥ್, ಐಟಿ ವಲಯದಲ್ಲಿ ಹಲವು ಸಂಸ್ಥೆಗಳು ಉದ್ಯೋಗ ಕಡಿತಗೊಳಿಸುತ್ತಿರುವುದರ ಬಗ್ಗೆ ಗಮನ ಸೆಳೆದು ನಿಮ್ಮ ಸಂಸ್ಥೆಯು ಅದೇ ದಾರಿ ತುಳಿಯಲಿದೆಯೇ ಎಂಬ ಪ್ರಶ್ನೆಗೆ ಗುರುವಾರ ಉತ್ತರಿಸಿದ್ದಾರೆ. 
"ನಾವಿಲ್ಲಿ ಉದ್ಯೋಗ ಸೃಷ್ಟಿಗೆ ಇರುವುದು. ಕಡಿಮೆ ಮಾಡುವುದಕ್ಕಲ್ಲ" ಎಂದು ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ, ಟಿಸಿಎಸ್ ಅಂಗಸಂಸ್ಥೆ ಬಿಪಿಒ ಕೇಂದ್ರವನ್ನು ಉದ್ಘಾಟಿಸಿದ ನಂತರ ಹೇಳಿದ್ದಾರೆ. 
ಭಾರತದಲ್ಲಿ ಹೆಚ್ಚು ಐಟಿ ನೌಕರಿಗಳನ್ನು ಸೃಷ್ಟಿಸಿರುವ ಸಂಸ್ಥೆಗಳಾದ ವಿಪ್ರೋ, ಇನ್ಫೋಸಿಸ್, ಕಾಗ್ನಿಸ್ಯಾಮ್ಟ್ ಮುಂತಾದ ಸಂಸ್ಥೆಗಳು ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ ಎಂಬ ಸುದ್ದಿ ವರದಿಯಾದ ಹಿನ್ನಲೆಯಲ್ಲಿ ಟಿಸಿಎಸ್ ಮಾಡಿರುವ ಈ ಘೋಷಣೆ ಸ್ವಾಗತಾರ್ಹವಾಗಿದೆ. 
ನಂತರ ಪ್ರತಿಕ್ರಿಯಿಸಿರುವ ಟಿಸಿಎಸ್ ವಕ್ತಾರ ಪ್ರದೀಪ್ತ ಬಾಗ್ಚಿ "ಡಿಜಿಟಲ್ ಇಂಡಿಯಾ ಅಭಿಯಾನ ಸರಿಯಾದ ದಾರಿಯಲ್ಲಿದ್ದು, ದೇಶಕ್ಕೆ ಐ ಟಿ ರಂಗದಲ್ಲಿ ಉಜ್ವಲ ಭವಿಷ್ಯ ಇದೆ. ನಾವು ನಮ್ಮ ಉದ್ದಿಮೆಯನ್ನು ವಿಸ್ತರಿಸಿ ಹೆಚ್ಚೆಚ್ಚು ಜನರನ್ನು ಒಟ್ಟಿಗೆ ತರಲು ಪ್ರಯತ್ನಿಸುತ್ತೇವೆ" ಎಂದಿದ್ದಾರೆ. 
೪೫ ದೇಶಗಳಲ್ಲಿ ವ್ಯವಹಾರ ಮಾಡುವ ಟಿಸಿಎಸ್ ಜಾಗತಿಕವಾಗಿ ೩,೮೭,೦೦೦ ಜನರಿಗೆ ಉದ್ಯೋಗ ನೀಡಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com