ಎರಡು ಸಂಸ್ಥೆಗಳ ಗರಿಷ್ಟ ಷೇರುಗಳನ್ನು ಕೊಳ್ಳಲು ಮುಂದಾದ ಕಾಫಿ ಡೇ

ಕೆಫೆ ಕಾಫಿ ಡೇ ಹೆಸರಿನಲ್ಲಿ ಹಲವು ಕಾಫಿ ಮಾರಾಟ ಅಂಗಡಿಗಳನ್ನು ನಡೆಸುವ ಕಾಫಿ ಡೇ ಎಂಟರ್ ಪ್ರೈಸಸ್, ತನ್ನ ಅಂಗಸಂಸ್ಥೆ ಸಿಕಲ್ ಲಾಜಿಸ್ಟಿಕ್ಸ್ ಸಾಗಾಣೆ, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೆಫೆ ಕಾಫಿ ಡೇ ಹೆಸರಿನಲ್ಲಿ ಹಲವು ಕಾಫಿ ಮಾರಾಟ ಅಂಗಡಿಗಳನ್ನು ನಡೆಸುವ ಕಾಫಿ ಡೇ ಎಂಟರ್ ಪ್ರೈಸಸ್, ತನ್ನ ಅಂಗಸಂಸ್ಥೆ ಸಿಕಲ್ ಲಾಜಿಸ್ಟಿಕ್ಸ್  ಸಾಗಾಣೆ, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ ಎರಡು ಸಣ್ಣ ಮಟ್ಟದ ಸಂಸ್ಥೆಗಳ ಗರಿಷ್ಟ ಷೇರುಗಳನ್ನು ಕೊಳ್ಳಲಿದೆ ಎಂದು ತಿಳಿಸಿದೆ. 
"ನಮ್ಮ ಸಂಸ್ಥೆಯ ಅಂಗ ಸಂಸ್ಥೆಯಾದ ಸಿಕಲ್ ಲಾಜಿಸ್ಟಿಕ್ಸ್ ಲಿಮಿಟೆಡ್, ೪೦ ಕೋಟಿ ರೂ ವರಮಾನ ಇರುವ ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ನ ಗರಿಷ್ಟ ಷೇರುಗಳನ್ನು ಕೊಳ್ಳಲು ಯೋಜನೆಗೆ ಚಾಲನೆ ನೀಡಲು ಒಪ್ಪಿಗೆ ಸೂಚಿಸದೆ" ಎಂದು ಕಾಫಿ ಡೇ ಬಿ ಎಸ್ ಇ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. 
"ಹಾಗೆಯೇ ೨೦ ಕೋಟಿ ರೂ ವರಮಾನ ಇರುವ ಲಾಜಿಸ್ಟಿಕ್ಸ್, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ ಸಂಸ್ಥೆಯೊಂದರ  ಗರಿಷ್ಟ ಷೇರುಗಳನ್ನು ಕೊಳ್ಳುವ ಯೋಜನೆಗೆ ಕೂಡ ನಿರ್ದೇಶಕರ ಸಮಿತಿ ಒಪ್ಪಿಗೆ ಸೂಚಿಸದೆ" ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com