ಜಿಎಸ್ ಟಿ ಕೌನ್ಸಿಲ್ ನಲ್ಲಿ ಸೇವಾ ತೆರಿಗೆ ಅಂತಿಮ, ಶಿಕ್ಷಣ, ಆರೋಗ್ಯಕ್ಕೆ ವಿನಾಯ್ತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷತ್‌ ಶುಕ್ರವಾರ ಸೇವಾ ತೆರಿಗೆ ದರವನ್ನು ಅಂತಿಮಗೊಳಿಸಲಾಗುತ್ತಿದ್ದು, ಇವು ಜುಲೈ 1ರಿಂದ ಜಾರಿಗೆ ಬರಲಿದೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ಶ್ರೀನಗರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷತ್‌  ಶುಕ್ರವಾರ ಸೇವಾ ತೆರಿಗೆ ದರವನ್ನು ಅಂತಿಮಗೊಳಿಸಲಾಗುತ್ತಿದ್ದು, ಇವು ಜುಲೈ 1ರಿಂದ ಜಾರಿಗೆ ಬರಲಿದೆ. ಜಿಎಸ್ ಟಿಯಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ. 
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಜಿಎಸ್‌ಟಿ ಪರಿಷತ್‌ ನ ಎರಡನೇ ದಿನದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ದೂರವಾಣಿ ಹಾಗೂ ಹಣಕಾಸು ಸೇವೆಗಳಿಗೆ ಶೇ 18ರಷ್ಟು, ರೇಸ್ ಕ್ಲಬ್, ಬೆಟ್ಟಿಂಗ್ ಮತ್ತು ಸಿನೆಮಾ ಹಾಲ್ ಗಳಿಗೆ ಶೇ.28ರಷ್ಚು ತೆರಿಗೆ ವಿಧಿಸಲಾಗುತ್ತಿದೆ.
ಇನ್ನು ಓಲಾ ಹಾಗೂ ಉಬರ್ ನಂತಹ ಕ್ಯಾಬ್ ಸೇವೆಗಳಿಗೆ ಶೇ.5ರಷ್ಚು ತೆರಿಗೆ ವಿಧಿಸಿಲು ಜಿಎಸ್ ಟಿ ಪರಿಷತ್ ನಿರ್ಧರಿಸಿದೆ. ಆದರೆ ಚಿನ್ನದ ಮೇಲಿನ ತೆರಿಗೆ ಇನ್ನು ಅಂತಿಮಗೊಂಡಿಲ್ಲ. ಹೀಗಾಗಿ ಜೂನ್ 3ರಂದು ಜಿಎಸ್ ಟಿ ಪರಿಷತ್ ಮತ್ತೆ ಸಭೆ ಸೇರಲಿದೆ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ತಿಳಿಸಿದ್ದಾರೆ. 
ಜಿಎಸ್‌ಟಿ ಜಾರಿಯಿಂದ ಆಹಾರಧಾನ್ಯಗಳ ಬೆಲೆ ಇಳಿಕೆಯಾಗಲಿದೆ. ಕೇಶತೈಲ (ಹೇರ್‌ ಆಯಿಲ್‌), ಸೋಪ್‌, ಟೂತ್‌ಪೇಸ್ಟ್‌ ಸೇರಿದಂತೆ ಹಲವು ಸರಕುಗಳ ಜಿಎಸ್‌ಟಿ ದರ ಶೇಕಡ 18ರಷ್ಟು ಇರಲಿದೆ. ಕಲ್ಲಿದ್ದಲಿನ ಜಿಎಸ್‌ಟಿ ದರ ಶೇಕಡ 5ಕ್ಕೆ ಇಳಿಕೆಯಾಗಲಿದೆ. ಸದ್ಯ ಕಲ್ಲಿದ್ದಲಿಗೆ ಶೇಕಡ 11.69ರಷ್ಟು ತೆರಿಗೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com