ನವದೆಹಲಿ: 2020 ರ ವೇಳೆಗೆ 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯೊಂದಿಗೆ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದ್ದು, ಠೇವಣಿ ಮೇಲೆ ವಾರ್ಷಿಕ ಶೇ.4 ರಷ್ಟು ಬಡ್ಡಿ ನೀಡುವುದು ಹಾಗೂ ಕ್ಯಾಶ್ ಬ್ಯಾಕ್ ಆಫರ್, ಉಚಿತ ಆನ್ ಲೈನ್ ವಹಿವಾಟು ಸೇರಿದಂತೆ ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ.