ಜಿಎಸ್ ಟಿ ಜಾರಿಯಿಂದ ಮನರಂಜನಾ ಸೇವೆ ತೆರಿಗೆ ಅಗ್ಗ

ಜಿಎಸ್ ಟಿ ಜಾರಿಯಾದ ನಂತರ ಸ್ಮಾರ್ಟ್ ಫೋನ್ ಹಾಗೂ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಈಗ ಜಿಎಸ್ ಟಿ ಜಾರಿಯಿಂದ ಮನರಂಜನಾ ಸೇವೆ ತೆರಿಗೆ ಸಹ ಕಡಿಮೆಯಾಗಲಿದೆ.
ಮನರಂಜನಾ ತೆರಿಗೆ
ಮನರಂಜನಾ ತೆರಿಗೆ
ನವದೆಹಲಿ: ಜುಲೈ 1 ರಿಂದ ಜಿಎಸ್ ಟಿ ಜಾರಿಯಾಗಲಿದ್ದು, ಯಾವ್ಯಾವ ವಿಭಾಗಗಳಿಗೆ ಎಷ್ಟು ತೆರಿಗೆ ಇರಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಎಸ್ ಟಿ ಜಾರಿಯಾದ ನಂತರ ಸ್ಮಾರ್ಟ್ ಫೋನ್ ಹಾಗೂ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಈಗ ಜಿಎಸ್ ಟಿ ಜಾರಿಯಿಂದ ಮನರಂಜನಾ ಸೇವೆ ತೆರಿಗೆ ಸಹ ಕಡಿಮೆಯಾಗಲಿದೆ. 
ಮನರಂಜನೆ ಹಾಗು ಅಮ್ಯೂಸ್ಮೆಂಟ್ ಗಳ ಮೇಲಿನ ತೆರಿಗೆ ಜಿಎಸ್ ಟಿ ಜಾರಿಯ ನಂತರ ಕಡಿಮೆಯಾಗಲಿದ್ದು, ಶುಲ್ಕವೂ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ. ಸಿನಿಮೆಟೋಗ್ರಾಫಿ ಫಿಲ್ಮ್ ಗಳಿಗೆ  ಕೆಲವು ರಾಜ್ಯಗಳಲ್ಲಿ ಶೇ.100 ರಷ್ಟು ತೆರಿಗೆ ದರ ಇದ್ದು, ಜಿಎಸ್ ಟಿ ಇದನ್ನು ಶೇ.28 ಕ್ಕೆ ಇಳಿಕೆ ಮಾಡಲಿದೆ. ಸರ್ಕಸ್, ಭಾರತೀಯ ಶಾಸ್ತ್ರೀಯ ನೃತ್ಯ ಸೇರಿದಂತೆ ವಿವಿಧ ಮನರಂಜನೆಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com