ಜಿಎಸ್ ಟಿ: ಸಕ್ಕರೆ, ಕಾಫಿ, ಚಹಾ, ಹಾಲಿನ ಪುಡಿ ಬೆಲೆ ಇಳಿಕೆ

ಜುಲೈ 1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ತೆರಿಗೆ ವ್ಯಾಪ್ತಿಯು ಕಡಿಮೆಯಾಗುವುದರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಜುಲೈ 1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ತೆರಿಗೆ ವ್ಯಾಪ್ತಿಯು ಕಡಿಮೆಯಾಗುವುದರಿಂದ ಸಕ್ಕರೆ, ಚಹಾ, ಕಾಫಿ ಮತ್ತು ಹಾಲಿನ ಪುಡಿ ಬೆಲೆ ಕಡಿಮೆಯಾಗಲಿದೆ.
ಪ್ರಸ್ತುತ, ಸಕ್ಕರೆಗೆ ನಿರ್ದಿಷ್ಟ ಕೇಂದ್ರ ಸುಂಕ ತೆರಿಗೆ ಪ್ರತಿ ಕ್ವಿಂಟಾಲ್ ಗೆ 71 ರೂಪಾಯಿ ಮತ್ತು 124 ರೂಪಾಯಿ ಸೆಸ್ ಇದೆ. ಅದರಲ್ಲಿ ಶೇಕಡಾ 6ಕ್ಕಿಂತ ಹೆಚ್ಚು ಜಾಹೀರಾತು ಮೌಲ್ಯದ ದರವಿರುತ್ತದೆ.
ಕೇಂದ್ರ ಮಾರಾಟ ತೆರಿಗೆ(ಸಿಎಸ್ಟಿ), ಆಕ್ಟ್ರೋಯಿ ಮತ್ತು ಪ್ರವೇಶ ತೆರಿಗೆಗಳನ್ನು ಪರಿಗಣಿಸುವುದಾದರೆ ಒಟ್ಟು ತೆರಿಗೆ ಮೌಲ್ಯ ಶೇಕಡಾ 8ರಷ್ಟಾಗುತ್ತದೆ.
ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ ಸಕ್ಕರೆ ಮೇಲೆ ಶೇಕಡಾ 5ರಷ್ಟಾದರೆ, ಪ್ರಸ್ತುತ ಇರುವ ತೆರಿಗೆಗಿಂತ ಶೇಕಡಾ 3ರಷ್ಟು ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಾಫಿ ಮತ್ತು ಚಹಾ ಮೇಲೆ ಸರಕು ಮತ್ತು ಸೇವಾ ತೆರಿಗೆಯಡಿ ಈಗಿರುವ ಶೇಕಡಾ 7ರಿಂದ ಶೇಕಡಾ 5ಕ್ಕೆ ಇಳಿಯಲಿದೆ.
ಹಾಲಿನ ಪುಡಿಗೆ ಕೇಂದ್ರ ಸುಂಕ ತೆರಿಗೆ ಶೂನ್ಯವಿದ್ದರೆ ಶೇಕಡಾ 5ರಷ್ಟು ವ್ಯಾಟ್ ಇರುತ್ತದೆ. 
ದೇಶದ ಅತ್ಯಂತ ಸುಧಾರಿತ ಮಹಾತ್ವಾಕಾಂಕ್ಷಿ ತೆರಿಗೆ ವಿಧಾನ ಜಿಎಸ್ ಟಿ ಎಂದು ನಂಬಲಾಗಿದ್ದು ಇದು ಹೆಚ್ಚಿನ ಪರೋಕ್ಷ ತೆರಿಗೆಗಳನ್ನು ಒಳಗೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com