ಮೊದಲ ತ್ರೈಮಾಸಿಕದಲ್ಲಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ.28 ರಷ್ಟು ಕುಸಿತ: ಐಡಿಸಿ

2017 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ.28 ರಷ್ಟು ಕುಸಿದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಟ್ಯಾಬ್ಲೆಟ್
ಟ್ಯಾಬ್ಲೆಟ್
ನವದೆಹಲಿ: 2017 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ.28 ರಷ್ಟು ಕುಸಿದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 
ಈ ವರ್ಷದ ಪ್ರಾರಂಭಿಕ ತ್ರೈಮಾಸಿಕದ ವರದಿಯ ಪ್ರಕಾರ ಶೇ.28 ರಷ್ಟು ಮಾರುಕಟ್ಟೆ ಕುಸಿದಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ವರದಿ ಪ್ರಕಟಿಸಿದ್ದು, ಮೊದಲ ತ್ರೈಮಾಸಿಕದಲ್ಲಿ 701,000 ಟ್ಯಾಬ್ಲೆಟ್ ಗಳು ಮಾರಾಟವಾಗಿದ್ದು, ಕಳೆದ ವರ್ಷ 716,000 ಟ್ಯಾಬ್ಲೆಟ್ ಗಳು ಮಾರಾಟವಾಗಿದ್ದವು. 2016 ಕ್ಕೆ ಹೋಲಿಸಿದರೆ ಈ ಬಾರಿ ಶೇ.2.2 ರಷ್ಟು ಮಾರಾಟ ಕುಸಿತ ಕಂಡಿದೆ ಎಂದು ಐಡಿಸಿ ವರದಿ ಮೂಲಕ ತಿಳಿದುಬಂದಿದೆ. 
ವಾಣಿಜ್ಯ ವಿಭಾಗದಲ್ಲಿ, ಸರ್ಕಾರಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಹೆಚ್ಚುತ್ತಿರುವುದರಿಂದ ಟ್ಯಾಬ್ಲೆಟ್ ಗೆ ಬೇಡಿಕೆಯೂ ಹೆಚ್ಚಲಿದೆ. ಇದರಿಂದಾಗಿ ಮಾರಾಟಗಾರರಿಗೆ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದ್ದು ಭಾರತದ ಮಾರುಕಟ್ಟೆಯಲ್ಲಿ ಉಳಿಯುವುದಕ್ಕೆ ಸಾಧ್ಯವಾಗಲಿದೆ ಎಂದು ಐಡಿಸಿ ಇಂಡಿಯಾದ ಮಾರುಕಟ್ಟೆ ವಿಶ್ಲೇಷಕರೊಬ್ಬರು ಹೇಳಿದ್ದಾರೆ. 
ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಮುಂಚೂಣಿಯಲ್ಲಿದ್ದು ಶೆ.21.3 ರಷ್ಟು ಪಾಲು ಹೊಂದಿದೆ. ವಾಣಿಜ್ಯ ವಿಭಾಗಗಳಲ್ಲಿ ಟ್ಯಾಬ್ಲೆಟ್ ನ ಮಾರಾಟ ಹೆಚ್ಚಿರುವುದರಿಂದ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗಳ ಮಾರಾಟ ಶೇ.4 ರಷ್ಟು ಏರಿಕೆಯಾಗಿದೆ ಎಂದು ಐಡಿಸಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com