ತೆರಿಗೆ ಲೆಕ್ಕಾಚಾರ: 2017-18ರ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.2 ರಷ್ಟು ಬೆಳವಣಿಗೆ ದಾಖಲು

ಅಕ್ಟೋಬರ್, 2017 ರವರೆಗೆ ನೇರ ತೆರಿಗೆ ಸಂಗ್ರಹಣೆಯ ತಾತ್ಕಾಲಿಕ ಅಂಕಿ ಅಂಶಗಳು ಹೇಳುವಂತೆ ನಿವ್ವಳ ತೆರಿಗೆ ಸಂಗ್ರಹ ರೂ. 4.39 ಲಕ್ಷ ಕೋಟಿ ರೂ ಆಗಿದ್ದು ........
ತೆರಿಗೆ ಲೆಕ್ಕಾಚಾರ: 2017-18ರ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.2 ರಷ್ಟು ಬೆಳವಣಿಗೆ ದಾಖಲು
ತೆರಿಗೆ ಲೆಕ್ಕಾಚಾರ: 2017-18ರ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.2 ರಷ್ಟು ಬೆಳವಣಿಗೆ ದಾಖಲು
ನವದೆಹಲಿ: ಅಕ್ಟೋಬರ್, 2017 ರವರೆಗೆ ನೇರ ತೆರಿಗೆ ಸಂಗ್ರಹಣೆಯ ತಾತ್ಕಾಲಿಕ ಅಂಕಿ ಅಂಶಗಳು ಹೇಳುವಂತೆ  ನಿವ್ವಳ ತೆರಿಗೆ ಸಂಗ್ರಹ ರೂ. 4.39 ಲಕ್ಷ ಕೋಟಿ ರೂ. ಆಗಿದ್ದು ಇದು ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಶೇ. 15.2 ರಷ್ಟು ಹೆಚ್ಚಾಗಿದೆ.
ನಿವ್ವಳ ನೇರ ತೆರಿಗೆ ಸಂಗ್ರಹಣೆ ಒಟ್ಟು 2017-18ರ ಹಣಕಾಸು ವರ್ಷದ ಬಜೆಟ್ ಅಂದಾಜಿನ 44.8 ಪ್ರತಿಶತವನ್ನು ಹೊಂದಿದೆ (9.8 ಲಕ್ಷ ಕೋಟಿ ರೂ.) ಮರುಪಾವತಿಗಾಗಿ ತೆಗೆದಿರಿಸಲ್ಪಡುವ ಮೊತ್ತಕ್ಕೆ ಮೊದಲು ಸಮಗ್ರ ಸಂಗ್ರಹಣೆ ಶೇ. 10.7 ರಷ್ಟು ಹೆಚ್ಚಾಗಿದೆ. 2017 ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಒಟ್ಟು 5.28 ಲಕ್ಷ ಕೋಟಿ ರೂ.ಸಂಗ್ರಹವಾಗಿದೆ ಎಂದು ಕೇಂದ್ರ ತೆರಿಗೆ ಮಂದಳಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. 
ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಒಟ್ಟು 89,507 ಕೋಟಿ ರೂ.ಮರುಪಾವತಿ ಮೊತ್ತವೆಂದು ತೆಗೆದಿರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com