ಏರ್ ಟೆಲ್
ಏರ್ ಟೆಲ್

ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರು ಬಳಕೆ ಮಾಡದ ಡಾಟಾ ಇನ್ನು ಮುಂದೆ ವ್ಯರ್ಥವಾಗುವುದಿಲ್ಲ!

ಏರ್ ಟೆಲ್ ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡಾಟಾ ವ್ಯರ್ಥವಾಗದಂತೆ ತಡೆಗಟ್ಟಲು ಏರ್ ಟೆಲ್ ಕ್ರಮ ಕೈಗೊಂಡಿದ್ದು, ತಿಂಗಳಾಂತ್ಯಕ್ಕೆ ಬಳಕೆಯಾಗದ ಡಾಟಾವನ್ನು ಮುಂದಿನ ತಿಂಗಳು ಬಳಕೆ
ನವದೆಹಲಿ: ಏರ್ ಟೆಲ್ ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡಾಟಾ ವ್ಯರ್ಥವಾಗದಂತೆ ತಡೆಗಟ್ಟಲು ಏರ್ ಟೆಲ್ ಕ್ರಮ ಕೈಗೊಂಡಿದ್ದು, ತಿಂಗಳಾಂತ್ಯಕ್ಕೆ ಬಳಕೆಯಾಗದ ಡಾಟಾವನ್ನು ಮುಂದಿನ ತಿಂಗಳು ಬಳಕೆ ಮಾಡಬಹುದಾದ ಸೌಲಭ್ಯವನ್ನು ಘೋಷಿಸಿದೆ. 
ಬಳಕೆಯಾಗದೇ ಹಾಗೆಯೇ ಉಳಿಯುವ ಡಾಟಾವನ್ನು ಕ್ಯಾರಿ ಫಾರ್ವರ್ಡ್(ಮುಂದಿನ ತಿಂಗಳಲ್ಲೂ ಬಳಕೆ) ಮಾಡಿಕೊಳ್ಳುವ ಸೌಲಭ್ಯವನ್ನು ಕಲ್ಪಿಸುತ್ತಿರುವುದಾಗಿ ಏರ್ ಟೆಲ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹೊಸ ಸೌಲಭ್ಯ  ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಉತ್ತಮವಾದ ಕೊಡುಗೆಯಾಗಿರಲಿದೆ ಎಂದು ಭಾರತಿ ಏರ್ ಟೆಲ್ ನ ಸಿಇಒ ತಿಳಿಸಿದ್ದಾರೆ.
ಸುಮಾರು 1,000 ಜಿಬಿ ವರೆಗಿನ ಡಾಟಾವನ್ನು ಹಾಗೆಯೇ ಉಳಿಸಿಕೊಳ್ಳಬಹುದಾಗಿದ್ದು, ಮೈ ಏರ್ ಟೆಲ್ ಆಪ್ ಮೂಲಕ ಡಾಟಾ ಬ್ಯಾಲೆನ್ಸ್ ನ್ನು ತಿಳಿದುಕೊಳ್ಳಬಹುದಾಗಿದೆ. ಭಾರತದ 87 ನಗರಗಳಲ್ಲಿ ಏರ್ ಟೆಲ್ ವಿ-ಫೈಬರ್ ಸುಮಾರು 1000 ಎಂಬಿಪಿಎಸ್ ಸ್ಪೀಡ್ ಇಂಟರ್ ನೆಟ್ ನ್ನು ಒದಗಿಸುತ್ತಿದ್ದು 2.1 ಮಿಲಿಯನ್ ಜನರು ಏರ್ ಟೆಲ್ ಬ್ರಾಡ್ ಬ್ಯಾಂಡ್ ನ್ನು ಬಳಕೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಜುಲೈ ನಲ್ಲಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಏರ್ ಟೆಲ್ ಇದೇ ಸೌಲಭ್ಯವನ್ನು ಒದಗಿಸಿತ್ತು. 

Related Stories

No stories found.

Advertisement

X
Kannada Prabha
www.kannadaprabha.com