ಸಾಂದರ್ಭಿಕ ಚಿತ್ರ
ವಾಣಿಜ್ಯ
ಹೊಸ ಜಿಎಸ್ಟಿ ದರಗಳು ಇಂದಿನಿಂದ: ಬೆಲೆ ಇಳಿಕೆಯಾಗುವ ಅಗತ್ಯ ವಸ್ತುಗಳ ಪಟ್ಟಿ ಇಲ್ಲಿದೆ
ಬುಧವಾರದಿಂದ ಜಾರಿಗೆ ಬರುವ ಪರಿಷ್ಕೃತ ಜಿ ಎಸ್ ಟಿ ಅಡಿಯಲ್ಲಿ 200 ಕ್ಕಿಂತಲೂ ಹೆಚ್ಚಿನ ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗಲಿದೆ.
ನವದೆಹಲಿ: ಬುಧವಾರದಿಂದ ಜಾರಿಗೆ ಬರುವ ಪರಿಷ್ಕೃತ ಜಿ ಎಸ್ ಟಿ ಅಡಿಯಲ್ಲಿ 200 ಕ್ಕಿಂತಲೂ ಹೆಚ್ಚಿನ ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗಲಿದೆ.
ಗುವಾಹತಿಯಲ್ಲಿ ನವೆಂಬರ್ 10 ರಂದು ನಡೆದ ಜಿ ಎಸ್ ಟಿ ಕೌನ್ಸಿಲ್ ಸಭೆಯಲ್ಲಿ, ಸುಮಾರು 210 ಸರಕುಗಳ ಮೇಲೆ ಜಿ ಎಸ್ ಟಿ ತೆರಿಗೆಯನ್ನು ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ದರ ವಿವರಗಳು ಕೆಳಗಿನಂತಿದೆ-
ಜಿ ಎಸ್ ಟಿ ತೆರಿಗೆ ಶೇ.28 ರಿಂದ ಶೇ.18 ಕ್ಕೆ ಕಡಿತಗೊಂಡ ಸರಕುಗಳು
- ವೈರ್, ಕೇಬಲ್ ಗಳು , ಇನ್ಸುಲೇಟೆಡ್ ಕಂಡಕ್ಟರ್ ಗಳು, ವಿದ್ಯುತ್ ನಿರೋಧಕಗಳು, ವಿದ್ಯುತ್ ಪ್ಲಗ್ ಗಳು, ಸ್ವಿಚ್, ಸಾಕೆಟ್, ಇನ್ನಿತರೆ ವಿದ್ಯುತ್ ಸಂಬಂಧಿ ಉಪಕರಣಗಳು
- ಎಲೆಕ್ಟ್ರಿಕ್ ಬೋರ್ಡ್ ಗಳು, ಫಲಕಗಳು, ಕನ್ಸೋಲ್, ವಿದ್ಯುತ್ ನಿಯಂತ್ರಣ ಅಥವಾ ವಿತರಣೆಗಾಗಿ ಕ್ಯಾಬಿನೆಟ್ ಗಳು ಇತ್ಯಾದಿ
- ಪಾರ್ಟಿಕಲ್ / ಫೈಬರ್ ಬೋರ್ಡ್ ಗಳು ಮತ್ತು ಪಾರದರ್ಶಕ ಮರ, ಮರದ ವಸ್ತುಗಳು, ಮರದ ಚೌಕಟ್ಟು, ನೆಲಗಟ್ಟು ಬ್ಲಾಕ್ ಗಳು
- ಪೀಠೋಪಕರಣಗಳು, ಹಾಸಿಗೆ
- ಟ್ರಂಕ್, ಸೂಟ್ ಕೇಸ್, ವ್ಯಾನಿಟಿ ಕೇಸ್, ಬ್ರೀಫ್ ಕೇಸ್, ಟ್ರಾವೆಲ್ ಬ್ಯಾಗ್ ಮತ್ತು ಇತರ ಕೈ ಚೀಲಗಳು, ಕೇಸ್ ಗಳು
- ಡಿಟರ್ಜೆಂಟ್ ಗಳು, ತೊಳೆಯುವ, ಸ್ವಚ್ಚತಾ ಸಲಕರಣೆಗಳು
- ಚರ್ಮ ಸ್ವಚ್ಚತೆಗೆ ಬಳಸುವ ಕ್ರೀಂ ಮತ್ತು ಲಿಕ್ವಿಡ್ ಗಳು
- ಶಾಂಪೂ, ಹೇರ್ ಕ್ರೀಂ, ಹೇರ್ ಡೈ ಇವೇ ಮೊದಲಾದ ಕೂದಲು ಶುಚಿಗೊಳಿಸುವ, ಅಂದಗೊಳಿಸುವ ವರ್ಧಕಗಳು
- ಸ್ಪ್ರೇ ಶೇವ್, ಆಫ್ಟರ್ ಶೇವ್ ಕ್ರೀಂ ಗಳು, ಪರ್ಫ್ಯೂಮ್ ಗಳು, ಸೌಂದರ್ಯ ವರ್ಧಕಗಳು,
- ಲ್ಯಾಂಪ್ ಹಾಗೂ ಲೈಟಿಂಗ್ ಗಳು, ಬ್ಯಾಟರಿ ಶೆಲ್ ಗಳು, ನೈರ್ಮಲ್ಯಕ್ಕಾಗಿ ಬಳಸುವ ಸಲಕರಣೆಗಳು, ಪ್ಲ್ಯಾಸ್ಟಿಕ್, ನೆಲದ ಹಾಸು, ಬಾತ್ ಶವರ್, ಸಿಂಕ್ ಗಳು, ವಾಶ್ ಬೇಸಿನ್, ಸೀಟುಗಳು, ಪ್ಲ್ಯಾಸ್ಟಿಕ್ ನೈರ್ಮಲ್ಯ ಸಾಮಾನುಗಳು
- ಮಾರ್ಬಲ್ ಹಾಗೂ ಗ್ರಾನೈಟ್ ಸ್ಲಾಬ್ ಗಳು, ಟೈಲ್ಸ್ ಗಳು,
- ವ್ಯಾಕ್ಯೂಮ್ ಫ್ಲಾಸ್ಕ್ಸ್, ಲೈಟರ್ ಗಳು
- ಗಡಿಯಾರಗಳು, ವಾಚ್ ಗಳು, ವಾಚ್ ಕೇಸ್ ಗಳು,
- ಬಟ್ಟೆ ಮತ್ತು ಚರ್ಮದ ಉತ್ಪನ್ನಗಳು
- ಉಪ್ಪಿನಕಾಯಿ ಭರಣಿ, ಸ್ಟೌ, ಕುಕ್ಕರ್ ಗಳು ಮತ್ತು ಅದೇ ರೀತಿಯ ಮನೆ ಬಳಕೆ ವಸ್ತುಗಳು
- ರೇಜರ್ ಮತ್ತು ರೇಜರ್ ಬ್ಲೇಡ್ ಗಳು
- ಪ್ರಿಂಟರ್ ಗಳು, ಕಾರ್ಟ್ರಿಜ್ ಗಳು, ಆಫೀಸ್ ಮತ್ತು ಡೆಸ್ಕ್ ಸಲಕರಣೆಗಳು, ಬಾಗಿಲು, ಕಿಟಕಿಗಳಿಗೆ ಬಳಸುವ ಅಲ್ಯುಮಿನಿಯಂ ಫ್ರೇಮ್ ಗಳು
- ಸಿಮೆಂಟ್ ಅಥವಾ ಕಾಂಕ್ರೀಟ್ ಕಲ್ಲು ಮತ್ತು ಕೃತಕ ಕಲ್ಲು, ಆಸ್ಫಾಲ್ಟ್ ಅಥವಾ ಸ್ಲೇಟ್, ಮೈಕಾ
- ಸೆರಾಮಿಕ್ ಬ್ಲಾಕ್ ಗಳು, ಕೊಳವೆಗಳು,
- ವಾಲ್ ಪೇಪರ್, ಕನ್ನಡಿ, ಸುರಕ್ಷತಾ ಗಾಜು,ಗಾಜಿನ ಹಾಳೆಗಳು, ಗಾಜಿನ ವಸ್ತುಗಳು ಎಲೆಕ್ಟ್ರಾನಿಕ್ ತೂಕದ ಯಂತ್ರ
- ಬೆಂಕಿ ಆರಿಸುವ ಸಲಕರಣೆಗಳು ಮತ್ತು ಬೆಂಕಿ ಆರಿಸುವ ಶುಲ್ಕ ಫೋರ್ಕ್ ಲಿಫ್ಟ್,
- ಬುಲ್ಡೋಜರ್ ಗಳು, ರೋಡ್ ರೋವರ್ ಗಳು, ನೆಲ ಅಗೆಯುವ ಯಂತ್ರ, ಎಸ್ಕಲೇಟರ್ ಗಳು
- ಸೂಕ್ಷ್ಮದರ್ಶಕ, ಪ್ರಯೋಗಾಲಯ ಉಪಕರಣಗಳು, ಹವಾಮಾನ ವಿಜ್ಞಾನ, ಜಲಶಾಸ್ತ್ರ, ಸಮುದ್ರಶಾಸ್ತ್ರ, ಭೂವಿಜ್ಞಾನ ಸಂಬಂಧ ಸಲಕರಣೆಗಳು, ಇನ್ನಿತರೆ ಪ್ರಯೋಗಾಲಯ ಸಲಕರಣೆಗಳು, ವಸ್ತುಗಳು
- ರಬ್ಬರ್ ಟ್ಯೂಬ್ಗಳು ಮತ್ತು ರಬ್ಬರಿನ ಇತರ ಉತ್ಪನ್ನಗಳು
ಜಿ ಎಸ್ ಟಿ ತೆರಿಗೆ ಶೇ.28 ರಿಂದ ಶೇ. 12 ಕ್ಕೆ ಕಡಿತಗೊಂಡ ಸರಕುಗಳು
- ಬೀಸುವ ಕಲ್ಲುಗಳು
- ಟ್ಯಾಂಕರ್ ಗಳು ಮತ್ತು ಇತರ ಶಸ್ತ್ರಸಜ್ಜಿತ ಹೋರಾಟದ ವಾಹನಗಳು
ಇತರೆ (ಶೇ.18 ರಿಂದ ಶೇ.12)
- ಸಂಸ್ಕರಿಸಿದ ಹಾಲು
- ಸಂಸ್ಕರಿಸಿದ ಸಕ್ಕರೆ
- ಪಾಸ್ತಾ
- ಕರಿ ಪೇಸ್ಟ್ ಮತ್ತು ಸಲಾಡ್ ರೆಸಿಪಿ,
- ಮಧುಮೇಹಿಗಳ ಆಹಾರ, ಔಷಧಕ್ಕೆ ಬಳಸುವ ಆಮ್ಲಜನಕ, ಪ್ರಿಂಟಿಂಗ್ ಇಂಕ್, ಹತ್ತಿ ಹಾಗೂ ಸೆಣಬಿನ ಕೈ ಚೀಲಗಳು,
- ಟೋಪಿಗಳು
- ಹೊಲಿಗೆ ಯಂತ್ರದ ನಿರ್ದಿಷ್ಟ ಭಾಗಗಳು
- ಸ್ಪೆಕ್ಟಾಕಲ್ಸ್ ಫ್ರೇಮ್ಗಳು
- ಬಿದಿರಿನ ಪೀಠೋಪಕರಣಗಳು
ಇತರೆ (ಶೇ.18 ರಿಂದ ಶೇ.5)
- ಅಕ್ಕಿಯ ಚಿಕ್ಕಿ, ಕಡಲೆಕಾಯಿ ಚಿಕ್ಕಿ, ಖಾಜಾ ಕಜುವಾಲಿ, ಕಡಲೆಕಾಯಿ ಸಿಹಿ ಗಟ್ಟಾ, ಕುಲಿಯಾ, ಆಲೂಗಡ್ಡೆಯ ಪೇಸ್ಟ್
- ಚಟ್ನಿ ಪುಡಿ
- ಫ್ಲೈ ಆಶ್
ಇತರೆ (ಶೇ.12ರಿಂದ ಶೇ.5)
- ತೆಂಗಿನಕಾಯಿ
- ಹತ್ತಿಯಂತಹಾ ನುಣುಪಾದ ನೇಯ್ದ ಫ್ಯಾಬ್ರಿಕ್ ಗಳು
- ಇಡ್ಲಿ ದೋಸೆ ಹಿಟ್ಟು
- ಜಿಂಕೆ ಚರ್ಮ, ಮತ್ತು ಸಂಯೋಜಿತ ಚರ್ಮದ ಸರಕುಗಳು
- ಕಾಯಿರ್ ಕಾರ್ಡೇಜ್ ಮತ್ತು ಹಗ್ಗಗಳು, ಸೆಣಬಿನ ಟ್ವೈನ್ ಗಳು, ಕಾಯಿರ್ ಉತ್ಪನ್ನಗಳು
- ಮೀನು ಬಲೆಗಳು ಮೀನಿನ ಗಾಳಗಳು
- ಫ್ಲೈ ಆಷ್ ಇಟ್ಟಿಗೆ
- ಉಡುಪು
- ಪಶು ಆಹಾರ (ದನಗಳಿಗೆ ಹಾಕುವ ಹಿಂಡಿಯಂತಹಾ ಪದಾರ್ಥ)
- ಸಿಹಿ ಆಲೂಗಡ್ಡೆ, ಮತ್ತು ಉಪ್ಪು ಮಿಶ್ರಿತ ಒಣ ತರಕಾರಿಗಳು
- ತೆಂಗಿನಕಾಯಿ ಚಿಪ್ಪು
- ಶೈತ್ಯೀಕರಿಸಿದ ಅಥವಾ ಒಣಗಿಸಿದ ಮೀನು
- ಖಂಡಸಿ ಸಕ್ಕರೆ
ವಿಮಾನ ಇಂಜಿನ್ ಗಳಿಗೆ 28% / 18% ಜಿ ಎಸ್ ಟಿ ಇಂದ 5%, ಗೆ ಇಳಿಕೆ, ವಿಮಾನ ಟೈರುಗಳು 28% ರಿಂದ 5% ಮತ್ತು ವಿಮಾನ ಸೀಟುಗಳಿಗೆ 28% ರಿಂದ 5% ಗೆ ಜಿ ಎಸ್ ಟಿ ಇಳಿಕೆ ಆಗಿದೆ.
ಶೆಲಾಕ್ಸ್ ಬಳೆಗಳು, ಲ್ಯಾಕ್ಸ್ ಗಳಿಗೆ 3% ಜಿ ಎಸ್ ಟಿ ಯನ್ನು ತೆಗೆದು ಹಾಕಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ