ಶೀಘ್ರವೇ ಭಾರತದಲ್ಲಿ ಮತ್ತಷ್ಟು ಉತ್ಪಾದನಾ ಘಟಕಗಳಿಗೆ ಚಾಲನೆ: ಕ್ಸಿಯಾಮಿ

ಭಾರತದ ಸ್ಮಾರ್ಟ್ ಫೋನ್ ಮಾರ್ಕೆಟ್ ನಲ್ಲಿ ಸ್ಯಾಮ್ ಸಂಗ್ ನಷ್ಟೇ ಜನಪ್ರಿಯತೆ ಗಳಿಸುತ್ತಿರುವ ಕ್ಸಿಯಾಮಿ, ಮೇಕ್ ಇನ್ ಇಂಡಿಯಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರತದಲ್ಲಿ ಉತ್ಪಾದನಾ ಘಟಕಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದೆ.
ಕ್ಸಿಯಾಮಿ
ಕ್ಸಿಯಾಮಿ
ನವದೆಹಲಿ: ಭಾರತದ ಸ್ಮಾರ್ಟ್ ಫೋನ್ ಮಾರ್ಕೆಟ್ ನಲ್ಲಿ ಸ್ಯಾಮ್ ಸಂಗ್ ನಷ್ಟೇ ಜನಪ್ರಿಯತೆ ಗಳಿಸುತ್ತಿರುವ ಕ್ಸಿಯಾಮಿ, ಮೇಕ್ ಇನ್ ಇಂಡಿಯಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರತದಲ್ಲಿ ಉತ್ಪಾದನಾ ಘಟಕಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದೆ. 
ಮುಂದಿನ ವರ್ಷದ ವೇಳೆಗೆ ಭಾರತದಾದ್ಯಂತ ಉತ್ಪದನಾ ಘಟಕಗಳನ್ನು ಸ್ಥಾಪಿಸುವುದಾಗಿ ಕ್ಸಿಯಾಮಿ ಸಂಸ್ಥೆ ತಿಳಿಸಿದೆ. ಒಂದು ಸಂಸ್ಥೆಯಾಗಿ ನಾವು ಮೇಕ್ ಇನ್ ಇಂಡಿಯಾ ಯೋಜನೆಗೆ ಶೇ.100 ರಷ್ಟು ಬದ್ಧರಾಗಿದ್ದೇವೆ ಎಂದು ಕ್ಸಿಯಾಮಿ ಇಂಡಿಯಾದ ಅಧ್ಯಕ್ಷ ಹಾಗೂ ಎಂಡಿ ಮನು ಜೈನ್ ತಿಳಿಸಿದ್ದಾರೆ. 
ನೋಯ್ಡಾದಲ್ಲಿ ಈಗಾಗಲೇ ತನ್ನ ಮೂರನೇ ಉತ್ಪಾದನಾ ಘಟಕವನ್ನು ಸಂಸ್ಥೆ ಘೋಷಣೆ ಮಾಡಿದ್ದು, 10,000mAh ಎಂಐ ಪವರ್ ಬ್ಯಾಂಕ್ ಹಾಗೂ 20,000mAh ಎಂಐ ಪವರ್ ಬ್ಯಾಂಕ್ 2i ನ್ನು ನೋಯ್ಡಾದಲ್ಲಿ ಉತ್ಪಾದನೆ ಮಾಡುವುದಾಗಿ ತಿಳಿಸಿದೆ. 
ಆಂಧ್ರಪ್ರದೇಶದಲ್ಲಿ ಈಗಾಗಲೇ ಸ್ಮಾರ್ಟ್ ಫೋನ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಭಾರತದಲ್ಲಿ ಮಾರಾಟವಾಗುವ ಶೇ.95 ರಷ್ಟು ಸ್ಮಾರ್ಟ್ ಫೋನ್ ಗಳನ್ನು ಇಲ್ಲಿಯೇ ಜೋಡಣೆ ಮಾಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com