ಭವಿಷ್ಯನಿಧಿ ಖಾತೆ ಹಣ ವರ್ಗಾವಣೆಗೆ ಆನ್ ಲೈನ್ ಸೇವೆ ಪ್ರಾರಂಭ, ಆರ್ ಪಿಎಫ್ ಓನಿಂದ ನೂತನ ಸುತ್ತೋಲೆ

ಭವಿಷ್ಯ ನಿಧಿ ಗ್ರಾಹಕರು ತಮ್ಮ ಭವಿಷ್ಯನಿಧಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸಿ ಭವಿಷ್ಯನಿಧಿ ಕಛೇರಿ ನೂತನ ಸುತ್ತೋಲೆ ಹೊರಡಿಸಿದೆ.
ಭವಿಷ್ಯ ನಿಧಿ ಕಛೇರಿ
ಭವಿಷ್ಯ ನಿಧಿ ಕಛೇರಿ
ಬೆಂಗಳೂರು: ಭವಿಷ್ಯ ನಿಧಿ ಗ್ರಾಹಕರು ತಮ್ಮ ಭವಿಷ್ಯನಿಧಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸಿ ಭವಿಷ್ಯನಿಧಿ ಕಛೇರಿ ನೂತನ ಸುತ್ತೋಲೆ ಹೊರಡಿಸಿದೆ. 
ಇತ್ತೀಚಿನ ದಿನಗಳಲ್ಲಿ ಭವಿಷ್ಯನಿಧಿ ಯೋಜನೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿರುವ ಭವಿಷ್ಯ ನಿದಿ ಕಛೇರಿ, ವಿತ್ ಡ್ರಾ ಸೇರಿದಂತೆ  ಹಲವು ವ್ಯವಸ್ಥೆಗಳನ್ನು ಆನ್ ಲೈನ್ ಅಡಿ ತಂದಿತ್ತು. ಇದೀಗ ತಕ್ಷಣದಿಂದಲೇ ಜಾರಿಗೆ ಬರುವಂತೆ, ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ನೌಕರ ಸೇರಿಕೊಂಡಾಗ ಆತ ಹಳೆ ಖಾತೆಯಲ್ಲಿದ್ದ ಹಣವನ್ನು ವಿತ್ ಡ್ರಾ ಮಾಡದೇ, ಹೊಸ ಸಂಸ್ಥೆಯ ಖಾತೆಗೆ ವರ್ಗಾವಣೆ ಮಾಡಲು ಸಾದ್ಯವಾಗುವಂತೆ, ಯುಎಎನ್ (ಸಾರ್ವತ್ರಿಕ ಖಾತೆ ಸಂಖ್ಯೆ) ಮೂಲಕ ಹೊಸ ಖಾತೆಗೆ ಹಿಂದಿನ ಪಿಎಫ್ ಹಣ ಜಮೆಯಾಗುವ ಅವಕಾಶವನ್ನು ಕಲ್ಪಿಸಿದೆ.
ಮಿಸ್ ಕಾಲ್ ಕೊಡುವ ಮೂಲಕ ತಮ್ಮ ಖಾತೆಯಲ್ಲಿ ಎಷ್ಟು ಪಿ ಎಫ್ ಹಣ ಇದೆ ಎಂದು ತಿಳಿದುಕೊಳ್ಳುವ ನೂತನ ಪದ್ದತಿಯನ್ನು ಕಳೆದ ಸೆಪ್ಟಂಬರ್ ತಿಂಗಳಾಂತ್ಯದಲ್ಲಿ ಭವಿಷ್ಯನಿಧಿ ಕಛೇರಿ ಜಾರಿಗೆ ತಂದಿತ್ತು. ಜತೆಗೆ ಹೊಸ ವೆಬ್ ಸೈಟ್ ಪ್ರಾರಂಭಿಸಿದ್ದ ಭವಿಷ್ಯನಿಧಿ ಕಛೇರಿ ಹೊಸ ಖಾತೆಗೆ ಪಿಎಫ್ ಹಣ ವರ್ಗಾಯಿಸುವ ಪ್ರಕ್ರಿಯೆ ಸರಳೀಕರಿಸುವುದಾಗಿ ಪ್ರಕಟಣೆ ಹೊರಡಿಸಿತ್ತು. ಆ ಪ್ರಕಟಣೆಯ ಅನುಸಾರನೂತನ ಪದ್ದತಿ ಇದೇ ನವೆಂಬರ್ 15ರಿಂದ ಜಾರಿಗೆ ಬಂದಿದೆ.
ಐದು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಭವಿಷ್ಯನಿಧಿ ಕಛೇರಿಯು, ತನ್ನ ಚಂದಾದಾರರಿಗೆ ನುಕೂಲ ಕಲ್ಪಿಸುವ ಸಲುವಾಗಿ ಹಣ ವರ್ಗಾವಣೆ ಸೇರಿದಂತೆ ಬಹುತೇಕ ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com