ಭವಿಷ್ಯದಲ್ಲಿ ಜಿಎಸ್ ಟಿ ಇಳಿಕೆಯಾಗಿ ಏಕರೂಪ ತೆರಿಗೆ ಜಾರಿ ಬರುವ ಸಾಧ್ಯತೆ: ಅರವಿಂದ ಸುಬ್ರಹ್ಮಣ್ಯನ್

ಮುಂದಿನ ದಿನಗಳಲ್ಲಿ ಕೆಲವು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಶೇಕಡಾ 18 ಮತ್ತು 12ರಿಂದ ಇನ್ನಷ್ಟು ಕಡಿಮೆಯಾಗಿ ಏಕರೂಪ ತೆರಿಗೆ ಜಾರಿಗೆ ಬರುವ .....
ಅರವಿಂದ ಸುಬ್ರಹ್ಮಣ್ಯನ್
ಅರವಿಂದ ಸುಬ್ರಹ್ಮಣ್ಯನ್
ಹೈದರಾಬಾದ್: ಮುಂದಿನ ದಿನಗಳಲ್ಲಿ ಕೆಲವು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಶೇಕಡಾ 18 ಮತ್ತು 12ರಿಂದ ಇನ್ನಷ್ಟು ಇಳಿಕೆಯಾಗಿ ಏಕರೂಪ ತೆರಿಗೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಹೇಳಿದ್ದಾರೆ.
ಕಳೆದ ಜುಲೈ 1ರಂದು ಜಾರಿಗೆ ಬಂದ ಕೇಂದ್ರ ಸರ್ಕಾರದ ಹೊಸ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ ಮುಂದಿನ ಆರರಿಂದ 9 ತಿಂಗಳು ಇರಲಿದ್ದು ಬೇರೆ ದೇಶಗಳಿಗೆ ಇದು ಮಾದರಿಯಾಗಲಿದೆ. ಮುಂದಿನ ಆರು ತಿಂಗಳಲ್ಲಿ ವ್ಯವಸ್ಥೆಯೆಲ್ಲವೂ ಸರಿಹೋಗಿ ಸ್ಥಿರತೆಯುಂಟಾಗಲಿದೆ. ಇದು ಬೇರೆ ದೇಶಗಳಿಗೂ ಅನುಕರಣೆಯಾಗಲಿದೆ. ನಂತರ ಶೇಕಡಾ 12 ಮತ್ತು ಶೇಕಡಾ 18 ಎಂಬ ತೆರಿಗೆ ದರ ಇಳಿಕೆಯಾಗಿ ಒಂದೇ ತೆರಿಗೆ ದರ ಬರಲಿದೆ.
ಇದುವರೆಗೆ ನಮ್ಮ ದೇಶದಲ್ಲಿ ಒಂದೇ ತೆರಿಗೆ ದರವಿರಲಿಲ್ಲ. ಅದನ್ನು ಸಾಧಿಸುವುದು ಕೂಡ ಕಷ್ಟ ಎಂದು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ ವಿಧಾನದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿವೆ ಎಂದು ಒಪ್ಪಿಕೊಂಡ ಅವರು, ರಾಜ್ಯಗಳಲ್ಲಿ ವಿವಿಧ ತಂತ್ರಜ್ಞಾನ ವ್ಯವಸ್ಥೆಯಿರುವುದರಿಂದ ಸ್ವಲ್ಪ ಕಠಿಣವಾಗಿದೆ. ಈ ವಿಷಯಗಳನ್ನು ಜಿಎಸ್ ಟಿ ಮಂಡಳಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು. 
ಜಿಎಸ್ ಟಿ ಜಾರಿ, ಹಣಕಾಸಿನ ಸುಧಾರಣೆಯ ರೂಪಾಂತರವಾಗಿದ್ದು, ಈ ದೇಶ ಅದನ್ನು ಹಿಂದೆ ಕಂಡಿಲ್ಲ. ಕೇಂದ್ರ ಮತ್ತು ಪ್ರತಿ ರಾಜ್ಯಗಳು ತಮ್ಮದೇ ಆದ ತೆರಿಗೆ ಅಧಿಕಾರಗಳನ್ನು ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ಜಿಎಸ್ ಟಿ ಎಷ್ಟು ಕ್ಲಿಷ್ಟವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅರವಿಂದ ಸುಬ್ರಹ್ಮಣ್ಯ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com