ಯಾರ ಆಣತಿ, ಒತ್ತಡಕ್ಕೆ ಮಣಿದು 2008-2014 ರ ಅವಧಿಯಲ್ಲಿ ಬಂಡವಾಳದಾರರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ಮಂಜೂರು ಮಾಡಲಾಗಿದೆ ಎಂಬುದನ್ನು ಈಗ ವದಂತಿ ಹಬ್ಬಿಸುತ್ತಿರುವವರನ್ನು ಸಾರ್ವಜನಿಕರು ಪ್ರಶ್ನಿಸಬೇಕಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಸಾಲ ಪಡೆದವರು ವಾಪಸ್ ನೀಡುವುದು ತಡವಾದಾಗ ಹಿಂದಿನ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು ಎಂಬುದನ್ನೂ ಸಾರ್ವಜನಿಕರು ಪ್ರಶ್ನಿಸಬೇಕಿದೆ ಎಂದು ಜೇಟ್ಲಿ ಹ್ಜೇಳಿದ್ದು, ಎನ್ ಡಿಎ ಸರ್ಕಾರ ಬಂಡವಾಳದಾರರ ಸಾಲ ಮನ್ನಾ ಮಾಡಿಲ್ಲ ಎಂದು ತಿಳಿಸಿದ್ದಾರೆ.