ಅಂತರ್ಜಾಲ ಎಂದೂ ಮುಕ್ತ ಹಾಗೂ ಉಚಿತವಾಗಿರಬೇಕು: ಟ್ರಾಯ್ ನಿರ್ದೇಶಕ ಆರ್.ಎಸ್ ಶರ್ಮಾ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶಕ ಆರ್.ಎಸ್. ಶರ್ಮಾ ಅಂತರ್ಜಾಲ ಸೇವೆ ಮುಕ್ತ ಮತ್ತು ಉಚಿತವಾಗಿರಬೇಕು ಎಂದಿದ್ದಾರೆ,
ಆರ್.ಎಸ್. ಶರ್ಮಾ
ಆರ್.ಎಸ್. ಶರ್ಮಾ
Updated on
ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶಕ ಆರ್.ಎಸ್. ಶರ್ಮಾ ಅಂತರ್ಜಾಲ ಸೇವೆ ಮುಕ್ತ ಮತ್ತು ಉಚಿತವಾಗಿರಬೇಕು ಎಂದಿದ್ದಾರೆ,
ಅಂತರ್ಜಾಲ ಯಾರೊಬ್ಬರ ಸ್ವತ್ತಲ್ಲ... ಆದ್ದರಿಂದ, ಇದು ಎಲ್ಲರಿಗೂ ಮುಕ್ತವಾಗಿರಬೇಕು ಮತ್ತು ಉಚಿತವಾಗಿರಬೇಕು ," ಎಂದು ಶರ್ಮಾ ಹೇಳಿದರು, ಇದರಿಂದ ಯಾವ ಟೆಲಿಕಾಂ ಸಂಸ್ಥೆಯೂ ಅಂತರ್ಜಾಲ ಸೇವೆಯನ್ನು ತಮ್ಮ ಹಣದಾಸೆಗೆ ಬಳಸಿಕೊಳ್ಳಬಾರದು. ಅಂತರ್ಜಾಲ ತಾಟಸ್ಥ್ಯ (ನೆಟ್ ನ್ಯೂಟ್ರಾಲಿಟಿ) ದ ಬಗ್ಗೆ ನೂತನ ಮತ್ತು ನಿರೀಕ್ಷಿತ ಶಿಫಾರಸುಗಳನ್ನು ಟ್ರಾಯ್  ಹೊರಡಿಸಿದೆ, ಮತ್ತು ಅಂತರ್ಜಾಲ ಸೇವೆಯಲ್ಲಿ ದೇಶದ ಯಾವಟೆಲಿಕಾಂ ಸೇವಾ ಸಂಸ್ಥೆಗಳೂ  ತಾರತಮ್ಯ  ಎಸಗಬಾರದೆಂದು ಟ್ರಾಯ್ ಶಿಫಾರಸ್ ಮಾಡಿದೆ.
"ಅಂತರ್ಜಾಲವು ವಿಶೇಷವಾಗಿ ಹೊಸ ಅವಿಷ್ಕಾರ, ಸ್ಟಾರ್ಟ್ ಅಪ್ ಉದ್ಯಮಗಳು, ಆನ್ ಲೈನ್ ವಹಿವಾಟುಗಳು, ಸರ್ಕಾರಿ ಅರ್ಜಿಗಳು ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮಗಳ ಸಂದರ್ಭದಲ್ಲಿ, ದೇಶದ ಪ್ರಮುಖ ವೇದಿಕೆಯಘೀಡೇ. "ಆದ್ದರಿಂದ, ಅಂತರ್ಜಾಲ ಎಂದಿಗೂ ಮುಕ್ತ ಮತ್ತು ಉಚಿತವಾಗಿರಬೇಕು ಹೊರತು ಅದು ಸಾರ್ವಜನಿಕರಿಗೆ ಬಳಕೆಗೆ ಕಠಿಣವಾಗಿರಬಾರದು." ಅವರು ಹೇಳಿದರು.
ಇಂದು ಭಾರತದಲ್ಲಿ ಅಂತರ್ಜಾಲ ತಾಟಸ್ಥ್ಯ ವನ್ನು ಎತ್ತಿ ಹಿಡಿಯಲಾಗಿದೆ ಆದರೆ ವಾಸ್ತವವಾಗಿ 2015ರಲ್ಲಿ ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಈ ಅಂತರ್ಜಾಲ ತಾಟಸ್ಥ್ಯ ನಿಯಮಗಳನ್ನು ಹಿಂಪಡೆಯಲಿಕ್ಕೆ ಶಿಫಾರಸ್ ಮಾಡಿತ್ತು. ದರೆ ಟ್ರಾಯ್ ತಾನು ಭಾರತೀಯ ಸನ್ನಿವೇಶಗಳನ್ನು ಗಮನದಲ್ಲಿರಿಸಿಕೊಂದು ಇಂತಹಾ ನಿಯಮಗಳನ್ನು ಪುರಸ್ಕರಿಸುತ್ತದೆ
"ನಮ್ಮಲ್ಲಿ 500 ದಶಲಕ್ಷ ಅಂತರ್ಜಾಲ ಚಂದಾದಾರರು ಮತ್ತು 1.3 ಶತಕೋಟಿ ಜನಸಂಖ್ಯೆ ಇದ್ದಾರೆ... ದೊಡ್ಡ ಬೆಳವಣಿಗೆಗಳೆಲ್ಲವೂ ಅಂತರ್ಜಾಲದಲ್ಲಿಯೇ ನಡೆಯುತ್ತವೆ ಹೀಗಾಗಿ ಅದು ಮುಕ್ತವಾಗಿರುವುದು ಅತ್ಯಂತ ಅಗತ್ಯವಾಗಿದೆ." ಅಂತರ್ಜಾಲ ಬಳಕೆಯ ಮುಕ್ತತೆಯ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com