ಸದ್ಯದಲ್ಲೇ ಷೇರು ಮಾರುಕಟ್ಟೆ ಪ್ರವೇಶಲಿರುವ ಎಚ್ ಎಎಲ್

ಬೆಂಗಳೂರು ಮೂಲದ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಷೇರು ಮಾರುಕಟ್ಟೆಯ ಪ್ರವೇಶಕ್ಕೆ ಸಿದ್ದತೆ ನಡೆಸಿದೆ.
ಎಚ್ ಎಎಲ್ ಅಧ್ಯಕ್ಷ ಟಿ ಸುವರ್ಣ ರಾಜು
ಎಚ್ ಎಎಲ್ ಅಧ್ಯಕ್ಷ ಟಿ ಸುವರ್ಣ ರಾಜು
ಬೆಂಗಳೂರು: ಬೆಂಗಳೂರು ಮೂಲದ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಷೇರು ಮಾರುಕಟ್ಟೆಯ ಪ್ರವೇಶಕ್ಕೆ ಸಿದ್ದತೆ ನಡೆಸಿದೆ. ರಕ್ಷಣಾ ವಲಯದ ಸಾರ್ವಜನಿಕ ಸಂಸ್ಥೆ ಎಚ್‌ ಎಎಲ್‌ ತನ್ನ ಆರಂಭಿಕ ಷೇರು ಬಿಡುಗಡೆಗೆ (ಐಪಿಒ) ಪ್ರಕ್ರಿಯೆಗಳನ್ನು ಆರಂಭಿಸಿದೆ.
ಷೇರು ಮಾರುಕಟ್ಟೆ ನಿಯಂತ್ರಣಾ ಮಂಡಳಿ (ಸೆಬಿ) ಯ ಜತೆಗೆ ಐಪಿಒ ಕುರಿತ ಪ್ರಕ್ರಿಯೆಗಳನ್ನು ಎಚ್‌ ಎಎಲ್‌ ಆರಂಭಿಸಿದೆ. ಎಚ್‌ ಎಎಲ್‌ ಸೆ.29ರಂದು ಸೆಬಿ ಯ ಜತೆ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
"ಎಚ್‌ ಎಎಲ್‌ನ ಪಾಲಿಗೆ ಇದು ಮಹತ್ವದ ನಿರ್ಧಾರವಾಗಿದೆ.  ಸರ್ಕಾರ ಸಂಸ್ಥೆಯಿಂದ ಭಾಗಶಃ ಬಂಡವಾಳ ಹಿಂಪಡೆದ ಕಾರಣಸಂಸ್ಥೆ ಈ ನಿರ್ಧಾರ ಕೈಗೊಂಡಿದೆ" ಎಂದು ಎಚ್‌ ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ತಿಳಿಸಿದ್ದಾರೆ.
ಕೇಂದ್ರ ಸರಕಾರ 2012ರಲ್ಲಿ ಎಚ್‌ ಎಎಲ್‌ನಿಂದ ಶೇ.10ರಷ್ಟು ಷೇರುಗಳನ್ನು ಮಾರಾಟ ಮಾಡಲು ಅನುಮತಿ ನೀಡಿತ್ತು. ಎಚ್‌ ಎಎಲ್‌ 2013ರಲ್ಲಿ ಎಸ್‌ಬಿಐ ಕ್ಯಾಪ್‌, ಗೋಲ್ಡ್‌ಮನ್‌ ಸ್ಯಾಕ್ಸ್‌, ಎಕ್ಸಿಸ್‌ ಕ್ಯಾಪಿಟಲ್‌ ಸಂಸ್ಥೆಗಳನ್ನು ಮರ್ಚೆಂಟ್‌ ಬ್ಯಾಂಕರ್‌ಗಳಾಗಿ ನೇಮಿಸಿದೆ.
ಬೆಂಗಳೂರು ಮೂಲದ ಎಚ್‌ ಎಎಲ್‌ 77 ವರ್ಷಗಳ ಇತಿಹಾಸವನ್ನು ಹೊಂದಿದೆ. ಯುದ್ಧ ವಿಮಾನ, ಸೇನೆಯಲ್ಲಿ ಬಳಸುವ ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಈ ಸಂಸ್ಥೆ ಸುಮಾರು 32,100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com