ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಅವಧಿ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ

ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಅವಧಿ ಠೇವಣಿ ಮೇಲಿನ ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ....
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ನವದೆಹಲಿ: ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಅವಧಿ ಠೇವಣಿ ಮೇಲಿನ ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 0.25ರಷ್ಟು ಕಡಿತ ಮಾಡಿದೆ. 
 1 ವರ್ಷದ ಅವಧಿಯವರೆಗೆ ಒಂದು ಕೋಟಿಗಿಂತ ಕಡಿಮೆ ಠೇವಣಿಗೆ ಈ ಬಡ್ಡಿ ದರ ಅನ್ವಯವಾಗಲಿದೆ.
ಹೊಸ ಬಡ್ಡಿ ದರದ ಪ್ರಕಾರ, 1 ವರ್ಷದವರೆಗಿನ ಠೇವಣಿಗೆ ಎಸ್ ಬಿಐ ಶೇಕಡಾ 6.50ರಷ್ಟು ಬಡ್ಡಿ ದರ ನೀಡಲಿದೆ. ಈ ಮುನ್ನ ಅದು ಶೇಕಡಾ 6.75ರಷ್ಟಾಗಿತ್ತು. 
ಇದೇ ಅವಧಿ ಮೇಲಿನ ಠೇವಣಿಗೆ ಇಷ್ಟೇ ಅವಧಿಗೆ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿ ದರವನ್ನು ಕೂಡ ಶೇಕಡಾ 7.25ರಿಂದ ಶೇಕಡಾ 7ಕ್ಕೆ ಇಳಿಸಲಾಗಿದೆ. 
ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಎಸ್ ಬಿಐ ಮೂಲ ದರವನ್ನು ಪ್ರತಿ ವರ್ಷಕ್ಕೆ ಶೇಕಡಾ 9ರಿಂದ 8.95ಕ್ಕೆ ಕಡಿತ ಮಾಡಿದೆ. ಒಂದು ವರ್ಷದ ಅವಧಿಯ ಸಾಲಕ್ಕೆ ಕನಿಷ್ಠ ವೆಚ್ಚ ಆಧಾರಿತ ಸಾಲ ದರ ಶೇಕಡಾ 8ರಷ್ಟು ಮುಂದುವರಿಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com