ನಾಮ್ ಕೆ ವಾಸ್ತೆ ಕಂಪನಿಗಳೊಂದಿಗೆ ನಂಟು: 4.5 ಲಕ್ಷ ನಿರ್ದೇಶಕರಿಗೆ ಸಂಕಷ್ಟ

ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿದ್ದ ಕಾರ್ಪೊರೇಟ್ ಕಂಪನಿಗಳೊಂದಿಗೆ ನಂಟು ಹೊಂದಿದ್ದ 4.5 ಲಕ್ಷ ನಿರ್ದೇಶಕರಿಗೆ ಸಂಕಷ್ಟ ಎದುರಾಗಲಿದೆ.
ನಾಮ್ ಕೆ ವಾಸ್ತೆ ಕಂಪನಿಗಳೊಂದಿಗೆ ನಂಟು: 4.5 ಲಕ್ಷ ನಿರ್ದೇಶಕರಿಗೆ ಸಂಕಷ್ಟ
ನಾಮ್ ಕೆ ವಾಸ್ತೆ ಕಂಪನಿಗಳೊಂದಿಗೆ ನಂಟು: 4.5 ಲಕ್ಷ ನಿರ್ದೇಶಕರಿಗೆ ಸಂಕಷ್ಟ
ನವದೆಹಲಿ: ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿದ್ದ ಕಾರ್ಪೊರೇಟ್ ಕಂಪನಿಗಳೊಂದಿಗೆ ನಂಟು ಹೊಂದಿದ್ದ 4.5 ಲಕ್ಷ ನಿರ್ದೇಶಕರಿಗೆ ಸಂಕಷ್ಟ ಎದುರಾಗಲಿದೆ. 
ಕಪ್ಪುಹಣದ ವಿರುದ್ಧ ಹೋರಾಟ ನಡೆಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಕ್ರಮ ಹಣ ವರ್ಗಾವಣೆಗಾಗಿಯೇ ಇರುತ್ತಿದ್ದ ನಾಮ್ ಕೆ ವಾಸ್ತೆ ಕಂಪನಿಗಳೊಂದಿಗೆ ನಂಟು ಹೊಂದಿರುವ 4.5 ಲಕ್ಷ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಪಿಪಿ ಚೌಧರಿ ಹೇಳಿದ್ದಾರೆ. 
ನೈಜ ಕಾರ್ಪೊರೇಟ್ ಸಂಸ್ಥೆಗಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.  ಕೇವಲ ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿರುವ 2,17,239 ಕಂಪನಿಗಳನ್ನು ಈಗಾಗಲೇ ದಾಖಲೆಗಾಳಿಂದ ತೆಗೆದು ಹಾಕಲಾಗಿದ್ದು, ಅಂತಹ ಸಂಸ್ಥೆಗಳು ಹಾಗೂ ಅವುಗಳೊಂದಿಗೆ ನಂಟು ಹೊಂದಿದ್ದ ನಿರ್ದೇಶಕರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ. 
ಸೆ.22 ರ ವರೆಗೆ 3,19,637 ನಿರ್ದೇಶಕರನ್ನು ಗುರುತಿಸಲಾಗಿದ್ದು, ಕಂಪನಿ ಕಾಯ್ದೆ 2013 ರ ಸೆಕ್ಷನ್ 164 (2) (a) ಪ್ರಕಾರ ಅನರ್ಹಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚೌಧರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com