ಜಿಎಸ್ ಟಿ: ರಫ್ತುದಾರರಿಗೆ, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿ ದೀಪಾವಳಿ ಬಂಪರ್ ಕೊಡುಗೆ

ಜಿಎಸ್ ಟಿ ಜಾರಿಯಿಂದಾಗಿ ತೀವ್ರ ಹಿನ್ನಡೆ ಕಂಡಿರುವ ರಫ್ತುದಾರರಿಗೆ, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿ ಕೇಂದ್ರ ಸರ್ಕಾರ ಶುಕ್ರವಾರ.....
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಜಿಎಸ್ ಟಿ ಜಾರಿಯಿಂದಾಗಿ ತೀವ್ರ ಹಿನ್ನಡೆ ಕಂಡಿರುವ ರಫ್ತುದಾರರಿಗೆ, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿ ಕೇಂದ್ರ ಸರ್ಕಾರ ಶುಕ್ರವಾರ ದೀಪಾವಳಿ ಬಂಪರ್ ಕೊಡುಗೆ ನೀಡಿದ್ದು, ಜಿಎಸ್ ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಮೂಲಕ ವ್ಯಾಪಾರಿಗಳ ಮತ್ತು ಗ್ರಾಹಕರ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ವ್ಯಾಪಾರಿಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರ ಯಾವುದೇ ತೆರಿಗೆ ವಿಧಿಸುತ್ತಿಲ್ಲ. ರಫ್ತುದಾರರು ಶೇ.0.1ರಷ್ಟು ಜಿಎಸ್ ಟಿಯಲ್ಲಿ ರಫ್ತು ಮಾಡಬಹುದಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ಇಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ ಅವರು, ವಾರ್ಷಿಕ 1.5 ಕೋಟಿ ರುಪಾಯಿವರೆಗೆ ವಹಿವಾಟು ನಡೆಸುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಇನ್ನು ಮುಂದೆ ಪ್ರತಿ ತಿಂಗಳು ರಿಟರ್ನ್ಸ್ ಸಲ್ಲಿಸುವ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಪ್ರತಿ ರಫ್ತುದಾರರಿಗೆ 2018ರ ಏಪ್ರಿಲ್ 1ರೊಳಗೆ ಇ ವ್ಯಾಲೆಟ್ ನೀಡಲಾಗುವುದು. ಅಲ್ಲದೆ ಇ ವ್ಯಾಲೆಟ್ ನಲ್ಲಿ ಮುಂಗಡ ಹಣವೂ ಸಿಗಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಇನ್ನು 50 ಸಾವಿರ ರುಪಾಯಿ ವರೆಗಿನ ಚಿನ್ನದ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ ನಿಮಯವನ್ನು ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದು ಹಾಕಲಾಗಿದ್ದು, ಜಿಎಸ್ ಟಿ ಕಾಂಪೊಸಿಷನ್ ಯೋಜನೆಯ ಮಿತಿಯನ್ನು 75 ಲಕ್ಷದಿಂದ 1 ಕೋಟಿ ರುಪಾಯಿ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com