ಟೆಲಿಕಾಂ ಕ್ಷೇತ್ರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ: 1.5 ಲಕ್ಷ ಉದ್ಯೋಗಗಳಿಗೆ ಕುತ್ತು!

ಟೆಲಿಕಾಂ ಕ್ಷೇತ್ರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದ್ದು, ಕಾರ್ಪೊರೇಟ್ ಡೌನ್ ಸೈಸಿಂಗ್(ಉದ್ಯೋಗಗಳ ಕಡಿತ) ದಿಂದಾಗಿ 1.5 ಲಕ್ಷ ಉದ್ಯೋಗಗಳಿಗೆ ಕುತ್ತು ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟೆಲಿಕಾಂ ಕ್ಷೇತ್ರ
ಟೆಲಿಕಾಂ ಕ್ಷೇತ್ರ
ಮುಂಬೈ: ಟೆಲಿಕಾಂ ಕ್ಷೇತ್ರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದ್ದು, ಕಾರ್ಪೊರೇಟ್ ಡೌನ್ ಸೈಸಿಂಗ್(ಉದ್ಯೋಗಗಳ ಕಡಿತ) ದಿಂದಾಗಿ 1.5 ಲಕ್ಷ ಉದ್ಯೋಗಗಳಿಗೆ ಕುತ್ತು ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಉಳಿಸಿಕೊಳ್ಳಲು ಘೋಷಣೆ ಮಾಡುತ್ತಿರುವ ಹೊಸ ಹೊಸ ಆಕರ್ಷಕ ಕೊಡುಗೆಗಳಿಂದಾಗಿ ಟೆಲಿಕಾಂ ಕ್ಷೇತ್ರಕ್ಕೆ ಒಂದು ಅಂದಾಜಿನ ಪ್ರಕಾರ  ಸುಮಾರು 8 ಲಕ್ಷ ಕೋಟಿಯಷ್ಟು ಸಾಲ ಇದ್ದು, ನಷ್ಟ ಉಂಟಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಟೆಲಿಕಾಂ ಕ್ಷೇತ್ರಕ್ಕೆ ಹೆಚ್ಚಿನ ಹೊರೆಯಾಗದಂತೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ಸಹ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಮೊಬೈಲ್ ಕಾಂಗ್ರೆಸ್ ನಲ್ಲಿ ಭಾಗವಹಿಸಿದ್ದ ಸಂವಹನ ಖಾತೆ ಸಚಿವ ಮನೋಜ್ ಸಿನ್ಹಾ " ಟೆಲಿಕಾಂ ಕ್ಷೇತ್ರಕ್ಕೆ ಉಂಟಾಗುತ್ತಿರುವ ಹೊರೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಈ ಹಿಂದೆ ಸರ್ಕಾರ ಮಧ್ಯಪ್ರವೇಶ ಮಾಡಿತ್ತು. ಅಗತ್ಯವಿದ್ದರೆ ಮತ್ತೊಮ್ಮೆ ಮಧ್ಯಪ್ರವೇಶ ಮಾಡುತ್ತದೆ ಎಂದು ಹೇಳಿದ್ದರು. 
ಟೆಲಿಕಾಂ ಇಂಡಸ್ಟ್ರಿ ಪ್ರಕಾರ ಟೆಲಿಕಾಂ ಸಂಸ್ಥೆಗಳು ಅತಿ ಹೆಚ್ಚು ವೆಚ್ಚ ಕಡಿವಾಣಕ್ಕಾಗಿ ಡೌನ್ ಸೈಸಿಂಗ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳದೇ ಬೇರೆ ಮಾರ್ಗವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದ್ದು, ಟೆಲಿಕಾಂ ಸಂಸ್ಥೆಗಳು ವಿಲೀನಗೊಳ್ಳುತ್ತಿರುವುದರಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳಿಗೆ ಕತ್ತರಿ ಬೀಳುತ್ತಿದೆ. ವೋಡಾಫೋನ್-ಐಡಿಯಾ ವಿಲೀನ ಪ್ರಕ್ರಿಯೆಯಿಂದಾಗಿ 1,800 ಉದ್ಯೋಗಗಳಿಗೆ ಕತ್ತರಿ ಹಾಕಲಾಗುತ್ತಿದ್ದು, ಮಾರ್ಚ್ ವೇಳೆಗೆ 5,000-6,000 ಉದ್ಯೋಗಗಳಿಗೆ ಕತ್ತರಿ ಬೀಳಲಿದೆ, ಇತ್ತ ವೋಡಾಫೋನ್ ಸಹ 1,400 ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಏರ್ ಟೆಲ್ 1,500 ನೌಕರರನ್ನು, ರಿಲಾಯನ್ಸ್ 1,200 ನೌಕರರನ್ನು ಉದ್ಯೋಗದಿಂದ ತೆಗೆದುಹಾಕುತ್ತಿದ್ದು ಒಟ್ಟಾರೆ  1.5 ಲಕ್ಷ ಉದ್ಯೋಗಗಳಿಗೆ ಕುತ್ತು ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com