ಜೈ ಭಾರತ್ ಮಾರುತಿ ಲಿಮಿಟೆಡ್. ಲಾಂಛನ
ವಾಣಿಜ್ಯ
ಜೈ ಭಾರತ್ ಮಾರುತಿ ಗ್ರೂಪ್ ನ ಮೇಲೆ ಐಟಿ ದಾಳಿ, 6 ಕೋಟಿ ನಗದು, ಮೂರು ಕೆಜಿ ಚಿನ್ನಾಭರಣ ವಶ
ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಜೈ ಭಾರತ್ ಮಾರುತಿ ಗ್ರೂಪ್ ಗೆ ಸೇರಿದ 60 ವಿವಿಧ ನಿವೇಶನಗಳಲ್ಲಿ ಇಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ನವದೆಹಲಿ: ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಜೈ ಭಾರತ್ ಮಾರುತಿ ಗ್ರೂಪ್ ಗೆ ಸೇರಿದ 60 ವಿವಿಧ ನಿವೇಶನಗಳಲ್ಲಿ ಇಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ದೆಹಲಿ ಎನ್ ಸಿಆರ್ ನ ವಿವಿಧೆಡೆಗಳಲ್ಲಿ ಈ ದಾಳಿ ನಡೆಸಲಾಗಿದ್ದು ದಾಳಿಯ ವೇಳೆ 6 ಕೋಟಿ ನಗದು, ಮೂರು ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾರುತಿ ಮತ್ತು ಅಶೋಕ್ ಲೆಲ್ಯಾಂಡ್ ನ ದೊಡ್ಡ ಸರಬರಾಜುದಾರ ಸಂಸ್ಥೆಗಳಲ್ಲಿ ಜೈ ಭಾರತ್ ಗ್ರೂಪ್ ಒಂದಾಗಿದೆ.
ದೆಹಲಿ, ಫರಿದಾಬಾದ್, ಗುರುಗ್ರಾಮ್, ಘಾಜಿಯಾಬಾದ್ ನಲ್ಲಿ ಜೆಬಿಎಂ ಲಿಮಿಟೆಡ್ ಗೆ ಸೇರಿದ ನಿವೇಶನಗಳಲ್ಲಿ ಗುರುವಾರದಿಂದಲೇ ಆದಾಯ ತೆರಿಗೆ ಇಲಾಖೆ ಪರಿಶೀಲನೆ ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ