ಆಧಾರ್ ನಿಂದಾಗಿ ಸರ್ಕಾರಕ್ಕೆ 9 ಬಿಲಿಯನ್ ಡಾಲರ್ ಉಳಿತಾಯ: ನಿಲೇಕಣಿ

ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆಯಿಂದಾಗಿ ಲಕ್ಷಾಂತರ ನಕಲಿ ಪಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದ್ದು,....
ನಂದನ್ ನಿಲೇಕಣಿ
ನಂದನ್ ನಿಲೇಕಣಿ
ವಾಷಿಂಗ್ಟನ್: ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆಯಿಂದಾಗಿ ಲಕ್ಷಾಂತರ ನಕಲಿ ಪಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಇದರಿಂದ ಸರ್ಕಾರ ಸುಮಾರು 9 ಬಿಲಿಯನ್ ಡಾಲರ್ ಉಳಿತಾಯವಾಗಿದೆ ಎಂದು ಆಧಾರ್ ಯೋಜನೆಯ ರೂವಾರಿ ಹಾಗೂ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ಹೇಳಿದ್ದಾರೆ.
ನಿನ್ನೆ ಅಭಿವೃದ್ಧಿಗಾಗಿ ಡಿಜಿಟಲ್ ಎಕಾನಮಿ ಕುರಿತ ವಿಶ್ವ ಬ್ಯಾಂಕ್ ನ ಸಮಿತಿ ಚರ್ಚೆಯಲ್ಲಿ ಆಧಾರ್ ಕುರಿತು ಮಾತನಾಡಿದ ನಿಲೇಕಣಿ, ಇದು ನಿಜಕ್ಕೂ ಉಭಯಪಕ್ಷೀಯ ವಿಷಯವಾಗಿದೆ ಎಂದರು.
ಆಧಾರ್ ಯೋಜನೆಯನ್ನು ಈ ಹಿಂದಿನ ಯುಪಿಎ ಸರ್ಕಾರ ಆರಂಭಿಸಿತ್ತು. ಆದರೆ ಅದನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕಟ್ಟುನಿಟ್ಟಿನಿಂದ ಜಾರಿಗೊಳಿಸುತ್ತಿದೆ. 
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸರಿಯಾದ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಲು ಆಧಾರ್ ಸಹಾಯ ಮಾಡುತ್ತಿದೆ ಎಂದು ನಂದನ್ ನಿಲೇಕಣಿ ಅವರು ಹೇಳಿದ್ದಾರೆ. 
ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿಲೇಕಣಿ ಅವರು, "ವಿಶ್ವ ಬ್ಯಾಂಕ್‌ ಡಿಜಿಟಲ್‌ ಐಡಿ ಪರಿಕಲ್ಪನೆಯನ್ನು ಆಂತರೀಕರಿಸುವ ಮೂಲಕ ನಿಜಕ್ಕೂ ದೊಡ್ಡ ಕೆಲಸವನ್ನು ಮಾಡಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com