ಪ್ರಪಂಚದ ಅತಿದೊಡ್ಡ ಮೊಟ್ಟೆ ಉತ್ಪಾದಕ ಸಂಸ್ಥೆಯಿಂದ ಭಾರತದಲ್ಲಿ ಅತ್ಯಾಧುನಿಕ ಕೋಳಿ ಫಾರ್ಮ್ ಸ್ಥಾಪನೆ: ಧಮೇಂದ್ರ ಪ್ರಧಾನ್

ವಿಶ್ವದ ಅತಿ ದೊಡ್ಡ ಮೊಟ್ಟೆ ಉತ್ಪಾದಕ ಸಂಸ್ಥೆಯಾದ ಐಎಸ್ಇ ಫುಡ್ಸ್ ಭಾರತದಲ್ಲಿ ಆಧುನಿಕ ಮಾದರಿಯ ಕೋಳಿ ಫಾರ್ಮ್ ಅನ್ನು ಸ್ಥಾಪಿಸಲು ಸಿದ್ಧವಾಗಿದೆ ಎಂದು ........
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
ಟೋಕಿಯೊ: ವಿಶ್ವದ ಅತಿ ದೊಡ್ಡ ಮೊಟ್ಟೆ ಉತ್ಪಾದಕ ಸಂಸ್ಥೆಯಾದ ಐಎಸ್ಇ ಫುಡ್ಸ್ ಭಾರತದಲ್ಲಿ ಆಧುನಿಕ ಮಾದರಿಯ ಕೋಳಿ ಫಾರ್ಮ್ ಅನ್ನು ಸ್ಥಾಪಿಸಲು ಸಿದ್ಧವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. 
ಮೂರು ದಿನಗಳ ಭೇಟಿಗಾಗಿ ಜಪಾನ್ ಗೆ ತೆರಳಿರುವ ಪ್ರಧಾನ್, ಐಎಸ್ಇ ಫುಡ್ಸ್ ಚೇರ್ಮನ್ ಅಧ್ಯಕ್ಷ ಹಿಕೊನೋಬು ಇಸೆ ಅವರನ್ನು ಭೇಟಿಯಾದ ಬಳಿಕ ಈ ಮಾಹಿತಿ ನೀಡಿದ್ದಾರೆ.
ಇಸೆ ಅವರ ಜತೆಯಲ್ಲಿರುವ  ಚಿತ್ರವನ್ನು ಟಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ಧರ್ಮೇಂದ್ರ  ಪ್ರಧಾನ್, ಮೊಟ್ಟೆ ಉತ್ಪಾದನಾ ಸಂಸ್ಥೆಯು ಭಾರತೀಯ ವಿದ್ಯಾರ್ಥಿಗಳಿಗೆ ಕೋಳಿ ಸಾಕಣೆ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ಆಸಕ್ತಿ ತೋರಿದೆ, ಇದು ಆ ಕ್ಷೇತ್ರದಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಅವರಿಗೆ  ಸಹಾಯ ಮಾಡುತ್ತದೆ ಎಂದಿದ್ದಾರೆ
"ವಿಶ್ವದ ಅತಿದೊಡ್ಡ ಮೊಟ್ಟೆ ಉತ್ಪಾದಕರಲ್ಲಿ ಒಬ್ಬರಾದ ಐಎಸ್ಇ ಫುಡ್ಸ್, ಪ್ರಾಯೋಗಿಕ ಆಧಾರದ ಮೇಲೆ ಭಾರತದಲ್ಲಿ ಸುಧಾರಿತ ಕೋಳಿ ಫಾರ್ಮ್ ಸ್ಥಾಪಿಸಲು ಆಸಕ್ತಿ ತಾಳಿದೆ" ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.
2016-2017ರ ಆರ್ಥಿಕ ವರ್ಷದಲ್ಲಿ ಭಾರತದ ಪಶು ಸಂಗೋಪನೆ, ಡೈರಿ ಉದ್ಯಮ ಮತ್ತು ಮೀನುಗಾರಿಕೆಗಳ ವರದಿಯ ಪ್ರಕಾರ ಭಾರತದಲ್ಲಿ ಕೋಳಿ ಸಾಕಣೆ ಕಳೆದ ನಾಲ್ಕು ದಶಕಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆ ಕಂದಿದೆ.
ಪ್ರಸ್ತುತ, ಭಾರತದ ಒಟ್ಟು ಕೋಳಿ ಉತ್ಪಾದನೆ 729.21 ಮಿಲಿಯನ್ (19 ನೇ ಜಾನುವಾರು ಜನಗಣತಿಯ ಪ್ರಕಾರ) ಮತ್ತು ಮೊಟ್ಟೆ ಉತ್ಪಾದನೆ  82.93 ಬಿಲಿಯನ್ ( 2015-16ರ ಅವಧಿಯಲ್ಲಿ) ಅಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com