ದ್ವಿತೀಯ ತ್ರೈಮಾಸಿಕ ವರದಿ: ಕೆನರಾ ಬ್ಯಾಂಕ್ ಗೆ 260 ಕೋಟಿ ರೂ. ಲಾಭ

ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಕ್, ಕೆನರಾ ಬ್ಯಾಂಕ್‌, ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 260.18 ಕೋಟಿ ರೂ.ನಿವ್ವಳ ಲಾಭ ದಾಕಲಿಸಿದೆ.
ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್
ಬೆಂಗಳೂರು: ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಕ್, ಕೆನರಾ ಬ್ಯಾಂಕ್‌, ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 260.18 ಕೋಟಿ ರೂ.ನಿವ್ವಳ ಲಾಭ ದಾಕಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 357 ಕೋಟಿ ರೂ.ಲಾಭ ಗಳಿಕೆಗೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 27 ರಷ್ಟು ಇಳಿಕೆಯಾಗಿದೆ.
"ಬ್ಯಾಂಕ್‌ ನ ಒಟ್ಟು ಆದಾಯ 12,187 ಕೋಟಿ ರೂ. ಗಳಿಂದ  11,995 ಕೋಟಿ ರೂ. ಗಳಿಗೆ ಇಳಿಕೆಯಾಗಿದೆ" ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಶರ್ಮಾ ಮಾಹಿತಿ ನೀಡಿದ್ದಾರೆ.
ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು 1,558 ಕೋಟಿ ರೂ. ಗಳಿಂದ 1,950 ಕೋಟಿ ರೂ ಗಳಿಗೆ ಏರಿಸಲಾಗಿದೆ. ವಸೂಲಿಯಾಗದ ಸಾಲದ ಪ್ರಮಾಣ ಶೇ 6.69 ರಿಂದ ಶೇ 7.02ಕ್ಕೆ ಏರಿದೆ. ಇದರಿಂದಾಗಿ ಬ್ಯಾಂಕ್ ನ ಒಟ್ತು ನಿವ್ವಳ ಲಾಬಾಂಶದಲ್ಲಿ ಇಳಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com