ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ಈ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ 2,484.3 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಈ ಅವಧಿಯಲ್ಲಿ 2,401.5 ಕೋಟಿ ಗಳಿಸಿದ್ದ ಮಾರುತಿ ಈ ಬಾರಿ ಬಾರಿ ಶೇ 3.4ರಷ್ಟು ಹೆಚ್ಚು ಲಾಭ ಗಳಿಸಿಕೊಂಡಿದೆ. ಸಂಸ್ಥೆಯ ನಿವ್ವಳ ಮಾರಾಟದಲ್ಲಿ ಶೇ 22ರಷ್ಟು ಹೆಚ್ಚಳವಾಗಿದ್ದು 21,438 ಕೋಟಿ ರೂ.ಗೆ ತಲುಪಿದೆ.
ಪ್ರಸಕ್ತ ಅವಧಿಯಲ್ಲಿ ಸಂಸ್ಥೆಯು 4.92 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು ಇದರಲ್ಲಿ 34,717 ವಾಹನಗಳನ್ನು ರಫ್ತು ಮಾದಲಾಗಿದೆ.