ರೆಸ್ಟೋರೆಂಟ್, ಮಾಲ್ ಗಳಲ್ಲಿ ಎಂಆರ್ ಪಿ ಬೆಲೆಗೆ ಜಿಎಸ್ ಟಿ ಸೇರ್ಪಡೆ ಕಡ್ಡಾಯ ಮಾಡಿ: ಸಚಿವರ ಗುಂಪು ಶಿಫಾರಸು

ವಸ್ತುವಿನ ಗರಿಷ್ಟ ಚಿಲ್ಲರೆ ಮೇಲೆ ಹೊಸ ಪರೋಕ್ಷ ತೆರಿಗೆಯನ್ನು ಕೆಲವು ಚಿಲ್ಲರೆ ಮಾರಾಟಗಾರರು ವಿಧಿಸುತ್ತಾರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಸ್ತುವಿನ ಗರಿಷ್ಟ ಚಿಲ್ಲರೆ ಮೇಲೆ ಹೊಸ ಪರೋಕ್ಷ ತೆರಿಗೆಯನ್ನು ಕೆಲವು ಚಿಲ್ಲರೆ ಮಾರಾಟಗಾರರು ವಿಧಿಸುತ್ತಾರೆ ಎಂದು ಗ್ರಾಹಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಣಾಮಕಾರಿ ನಿಯಮ ಜಾರಿಗೆ ತರಲು ಗರಿಷ್ಟ ಚಿಲ್ಲರೆ ಬೆಲೆಯ ವಸ್ತುಗಳು ಜಿಎಸ್ ಟಿ ಅಂಗವನ್ನು ಹೊಂದಿರಬೇಕೆಂದು ರಾಜ್ಯ ಹಣಕಾಸು ಸಚಿವರುಗಳ ಉನ್ನತ ಮಟ್ಟದ ತಂಡ ಶಿಫಾರಸು ಮಾಡಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಅನುಸರಣೆ ಹೊರೆಯನ್ನು ಸುಲಭಗೊಳಿಸಲು, ಗರಿಷ್ಟ ಚಿಲ್ಲರೆ ಬೆಲೆಗೆ ಮಾರಾಟ ಮಾಡಿದ ವಸ್ತುಗಳ ಮೇಲಿನ ಬೆಲೆಗಿಂತ ಹೆಚ್ಚು ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ ಅದು ಅಪರಾಧ ಎಂದು ಪರಿಗಣಿಸಬೇಕೆಂದು ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಸರ್ಮ ನೇತೃತ್ವದ ಹಣಕಾಸು ಸಚಿವರು, ಜಿಎಸ್ ಟಿ ಮಂಡಳಿಗೆ ಮಾಡಿರುವ ಶಿಫಾರಸಿನಲ್ಲಿ ಹೇಳಲಾಗಿದೆ.
ಈ ನಿಯಮ ಪ್ಯಾಕೇಜ್ ಆಹಾರಗಳನ್ನು ಮಾರಾಟ ಮಾಡುವ ವಸ್ತುಗಳು, ಎಂಆರ್ ಪಿಗಳನ್ನು ಹೊಂದಿರುವ ಬಾಟಲ್ ಗಳು ಇತ್ಯಾದಿಗಳನ್ನು ಮಾರಾಟ ಮಾಡುವ ರೆಸ್ಟೊರೆಂಟ್ ಗಳು, ತಿನಿಸುಗಳು, ಮಾಲ್ ಗಳಿಗೆ ಅನ್ವಯವಾಗುತ್ತದೆ. ಇಂತಹ ಸ್ಥಳಗಳಲ್ಲಿ ವಸ್ತುಗಳನ್ನು ಎಂಆರ್ ಪಿಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಮತ್ತು ಜಿಎಸ್ ಟಿಯನ್ನು ಕೂಡ ಹೇರಲಾಗುತ್ತದೆ.
ನವೆಂಬರ್ 10ರಂದು ಹಣಕಾಸು ಸಚಿವ ಅರುಣ್ ಜೇಟ್ಲಿಯವರ ನೇತೃತ್ವದಲ್ಲಿ ಗುವಾಹಟಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯಗಳ ಹಣಕಾಸು ಸಚಿವರು ಭಾಗವಹಿಸಲಿದ್ದು ತಂಡದ ಶಿಫಾರಸುಗಳನ್ನು ಪರಿಗಣಿಸುವ ಸಾಧ್ಯತೆಯಿದೆ. 
ಸಚಿವರ ತಂಡವು ಐಟಿ ರಿಟರ್ನ್ಸ್ ಸಲ್ಲಿಸಲು ವಿಳಂಬ ಮಾಡುವವರಿಗೆ ದಂಡ ಮೊತ್ತವನ್ನು 100 ರೂ. ಬದಲಿಗೆ 50 ರೂಪಾಯಿ ಇಳಿಸಬೇಕೆಂದು, 3 ತಿಂಗಳಿಗೊಮ್ಮೆ ಐಟಿ ರಿಟರ್ನ್ಸ್ ಸಲ್ಲಿಸಲು ತೆರಿಗೆದಾರರಿಗೆ ಅವಕಾಶ ನೀಡಬೇಕೆಂದು, ಐಟಿ ರಿಟರ್ನ್ಸ್ ಸಲ್ಲಿಕೆಯ ವಿಧಾನವನ್ನು ಸರಳಗೊಳಿಸಬೇಕೆಂದು ಕೂಡ ಶಿಫಾರಸು ಮಾಡಿದೆ.
ಉತ್ಪಾದಕರಿಗೆ ಮತ್ತು ರೆಸ್ಟೊರೆಂಟ್ ಗಳ ಮೇಲಿನ ತೆರಿಗೆಯನ್ನು ಶೇಕಡಾ 1ಕ್ಕೆ ಕಡಿತಗೊಳಿಸಬೇಕೆಂದು ಮುಖ್ಯವಾಗಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com