ದೀರ್ಘಕಾಲೀನ ಆರ್ಥಿಕ ಉಪಯೋಗಕ್ಕಾಗಿತಕ್ಷಣದ ಆರ್ಥಿಕ ಸಂಕಷ್ಟವು ಪರಿಹಾರವಲ್ಲ: ರಘುರಾಮ್ ರಾಜನ್

ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಪನಗದಿಕರಣದ ಬಗೆಗೆ ಕಡೆಗೂ ಮೌನ ಮುರಿದಿದ್ದಾರೆ.
ರಘುರಾಮ್ ರಾಜನ್
ರಘುರಾಮ್ ರಾಜನ್
ನವದೆಹಲಿ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಪನಗದಿಕರಣದ ಬಗೆಗೆ ಕಡೆಗೂ ಮೌನ ಮುರಿದಿದ್ದಾರೆ. ತನ್ನ 'ಐ ಡೂ ವಾಟ್ ಐ ಡೂ: ಆನ್ ರಿಫಾರ್ಮ್, ರೆಟೋರಿಕ್ ಆಂಡ್ ರಿಸಾಲ್ವ್'  ಪುಸ್ತಕದಲ್ಲಿ ರಾಜನ್ ಮೋದಿ ಸರ್ಕಾರದ ಮಹತ್ವದ ತೀರ್ಮಾನವಾಗಿದ್ದ ಅಪನಗದಿಕರಣ ಕುರಿತು ಬರೆದುಕೊಂಡಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ವರದಿಯಲ್ಲಿ ಹೇಳಿದಂತೆ, ದೀರ್ಘಕಾಲೀನ ಆರ್ಥಿಕ ಉಪಯೋಗಕ್ಖಾಗಿ ತಕ್ಷಣದ ಆರ್ಥಿಕ ಸಂಕಷ್ಟವು ಪರಿಹಾರವಲ್ಲ ಎಂದು ರಾಜನ್ ನುಡಿದಿದ್ದಾರೆ. ಈ ಮುಖೇನ ರಾಜನ್ ಅಪನಗದಿಕರಣ ಕ್ರಮದ ಕುರಿತು ಅಸಮಾಧಾನವನ್ನು  ಹೊಂದಿದ್ದಾರೆ ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ಗೆ ನೀಡಿದ ಸಂದರ್ಶನದಲ್ಲಿ, ರಾಜನ್ ತಮ್ಮ ಅಧಿಕಾರಾವಧಿಯಲ್ಲಿ ಯಾವ ಕಾರಣಕ್ಕೂ ಅಪನಗದಿಕರಣವನ್ನು ಜಾರಿ ಮಾಡುವುದರ ಕುರಿತಂತೆ ತೀರ್ಮಾನಿಸಿರಲಿಲ್ಲ ಎಂದಿದ್ದಾರೆ.
ಕಳೆದ ವರ್ಷ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು 1000 ಮತ್ತು 500 ರೂ.ನೋಟು ಗಳನ್ನು ಅಮಾನ್ಯಗೊಳಿಸಿದ್ದರು. ಇದನ್ನು ಅವರು ಕಪ್ಪು ಹಣದ ವಿರುದ್ಧವಾಗಿ 'ಸರ್ಜಿಕಲ್ ಸ್ಟ್ರೈಕ್' ಎಂದು ಘೋಷಿಸಿದ್ದರು. ಆರ್ ಬಿಐ ನ ಇತ್ತೀಚಿನ ವರದಿಯಲ್ಲಿ ಅಪನಗದಿಕರಣದಿಂದ ರದ್ದಾದ ಶೇ. 99 ನೋಟುಗಳು ಬ್ಯಾಂಕ್ ಗೆ ಮರಳಿದೆ ಎನ್ನಲಾಗಿತ್ತು.
ರಘುರಾಮ್ ರಾಜನ್ ಕಳೆದ ವರ್ಷ ಸೆಪ್ಟೆಂಬರ್ 5 ರಂದು ಆರ್ ಬಿಐ ಗವರ್ನರ್ಹುದ್ದೆಯಿಂದ ನಿವೃತ್ತರಾಗಿದ್ದರು. ಮುಂದಿನ ವಾರ ಬಿಡುಗಡೆ ಆಗಲಿರುವ ಅವರ ಇತ್ತೀಚಿನ ಪುಸ್ತಕ ಅವರು ಆರ್ ಬಿಐ ಗವರ್ನರ್ ಆಗಿದ್ದಾಗ ನೀಡಿದ್ದ ವಿಶೇಷ ಭಾಷಣಗಳ ಸಂಕಲನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com